ಬೈಕ್‍ಗೆ ಬುಲೆರೊ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು…

58
firstsuddi

ಚಿತ್ರದುರ್ಗ : ಬೈಕ್‍ಗೆ ಬುಲೆರೊ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಮಲ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೈಕ್ ನಲ್ಲಿದ್ದ ನಾಗರಾಜ (40) ಹಾಗೂ ಮುಮ್ತಾಜ್ (35) ಮೃತ ದುರ್ದೈವಿಗಳು.

ಅಪಘಾತ ನಂತರ ಬುಲೆರೊ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ನಾಗರಾಜ ಹಾಗೂ ಮುಮ್ತಾಜ್ ಅವರು ಮುಂಜಾನೆ ಗುಡ್ಡದರಂಗವ್ವನಹಳ್ಳಿಯಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ಚಿತ್ರದುರ್ಗಕ್ಕೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ತಿಳಿದುಬಂದಿದೆ.