ಶ್ರೀನಗರ : ಭಾರತೀಯ ಸೇನೆ ಮತ್ತು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಭಯೋತ್ಪಾದಕರಿಗೆ ಹಣಕಾಸು, ಆಶ್ರಯ, ಪ್ರಯಾಣ ಸೇರಿ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದ್ದ ಏಳು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಕಾಶ್ಮೀರದ ಶೋಪಿಯಾನ ಜಿಲ್ಲೆಯ ವಿವಿಧs ಭಾಗಗಳಿಂದ ಇವರೆಲ್ಲರನ್ನು ಬಂಧಿಸಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಮಿಯುಲ್ಲಾ ಫಾರೂಕ್ ಚೋಪಾನ್, ರಮೀಜ್ ವಾನಿ, ರೌಫ್ ಅಹ್ಮದ್ ವಾನಿ, ಜಹೀದ್ ಹುಸ್ಸೇನ್ ವಾನಿ, ಶಾಹೀದ್ ಅಹ್ಮದ್ ರಾಥರ್, ಫೈಜಾನ್ ಅಹ್ಮದ್ ಖಾನ್, ಹಿಲಾಲ್ ಅಹ್ಮದ್ ವಾನಿ ಬಂಧಿತರಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಬೇಕಾದ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಶೋಪಿಯಾನ್ ಪೊಲೀಸರು ಇದೀಗ ತಮ್ಮ ಕಾರ್ಯಾಚರಣೆಯನ್ನು ಶುರು ಮಾಡಿದ್ದಾರೆ.