ಭಾರತದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿಲ್ಲ : ಕೇಂದ್ರ ಆರೋಗ್ಯ ಸಚಿವ.

67
firstsuddi

ನವದೆಹಲಿ : ಭಾರತದಲ್ಲಿ ಈವರೆಗೆ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯಾ ಅವರು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈವರೆಗೆ ಒಮಿಕ್ರೋನ್ ಪತ್ತೆಯಾಗಿಲ್ಲ, ಓಮಿಕ್ರಾನ್ ಸೋಂಕು ದಕ್ಷಿಣ ಆಫ್ರಿಕಾ, ಲಂಡನ್, ಜರ್ಮನ್, ಜಪಾನ್, ಹಾಂಕಾಂಗ್ ಸೇರಿದಂತೆ 12 ದೇಶಗಳಲ್ಲಿ ಕಾಣಿಸಿದೆ. ನಾವು ತಕ್ಷಣ ಅನುಮಾನಾಸ್ಪದ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಜೀನೋಮ್ ಅನುಕ್ರಮವನ್ನು ನಡೆಸುತ್ತಿದ್ದೇವೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಸಾಕಷ್ಟು ಕಲಿತಿದ್ದೇವೆ. ಇಂದು ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಮತ್ತು ಪ್ರಯೋಗಾಲಯಗಳಿವೆ. ನಾವು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ತಿಳಿಸಿದರು.