ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ -ವಿ ಲಸಿಕೆ ತುರ್ತು ಬಳಕೆಗೆ ಅನುಮತಿ…

136
firstsuddi

ನವದೆಹಲಿ : ಕೋವಿಶೀಲ್ಡ್, ಕೋವಾಕ್ಸಿನ್ ನಂತರ ರಷ್ಯಾ ಅಭಿವೃದ್ಧಿಪಡಿಸಿರುವ ಮೂರನೇ ಕೋವಿಡ್ -19 ಲಸಿಕೆಯಾದ ಸ್ಪುಟ್ನಿಕ್ -ವಿ ಲಸಿಕೆ ತುರ್ತು ಬಳಕೆಗೆ ಭಾರತ ಇಂದು ಅನುಮತಿ ನೀಡಿದೆ. ಕೊರೊನಾ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಲಸಿಕೆ ವಿತರಣೆ ಹೆಚ್ಚಿಸಲು ತಜ್ಞರ ಸಮಿತಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಹಿನ್ನೆಲೆ ಡಿಸಿಜಿಐ ಅನುಮತಿ ನೀಡಿದೆ.

ಭಾರತ ತನ್ನ ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸಿದೆ. ಹೀಗಾಗಿ, ರಷ್ಯಾದ ಡೈರೆಕ್ಟ್ ಇನ್ವೆಸ್ಟ್ ಫಂಡ್ (ಆರ್ಡಿಐಎಫ್) ಲಸಿಕೆ ತಯಾರಿಸಲು ಹಲವು ಭಾರತೀಯ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಲಸಿಕೆ ಪ್ರಮಾಣಗಳ ಉತ್ಪಾದನೆಗೆ ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಗ್ಲ್ಯಾಂಡ್ ಫಾರ್ಮಾ, ಹೆಟೆರೊ ಬಯೋಫಾರ್ಮಾ , ವಿಕ್ರೋ ಬಯೋಟೆಕ್, ಸ್ಟೆಲಿಸ್ ಬಯೋಫಾರ್ಮಾ ಮತ್ತು ಸೇರಿಕೊಂಡಿವೆ.

ಮುಂದಿನ ದಿನಗಳಲ್ಲಿ ನೋವಾವಾಕ್ಸ್, ಜಾನ್ಸನ್ ಅಂಡ್ ಜಾನ್ಸನ್, ಇಂಟ್ರಾನೇಸಲ್ (ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆ) ಹಾಗೂ ಜೈಡಸ್ ಕ್ಯಾಡಿಲಾ ಲಸಿಕೆಗೂ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದ್ದು, ಸುಮಾರು 20 ಬೇರೆ ಬೇರೆ ಕೊರೊನಾ ಲಸಿಕೆಗಳು ದೇಶದಲ್ಲಿ ಪ್ರಯೋಗದ ವಿವಿಧ ಹಂತದಲ್ಲಿವೆ.