ಮಸ್ಕಿ ಚುನಾವಣೆ : ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಗಾಯಕಿ ಮಂಗ್ಲಿ ಪ್ರಚಾರ…

106
firstsuddi

ರಾಯಚೂರು : ನಾಳೆ (ಏ. 13 ರಂದು) ತೆಲುಗಿನ ‘ಕಣ್ಣೇ ಅದಿರಿಂದಿ’ ಹಾಡಿನ ಖ್ಯಾತಿಯ ಗಾಯಕಿ ಮಂಗ್ಲಿ (ಸತ್ಯವತಿ ರಾಠೋಡ್) ಅವರು ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರ ಪರವಾಗಿ ಪ್ರಚಾರ ಮಾಡಲು ಆಗಮಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಡವಿಭಾವಿ ತಾಂಡಾ, 4.30ಕ್ಕೆ ಹಡಗಲಿ ತಾಂಡಾ ಹಾಗೂ ಸಂಜೆ 5.30ಕ್ಕೆ ಮಸ್ಕಿ ಪಟ್ಟಣದಲ್ಲಿ ಮತ ಪ್ರಚಾರ ನಡೆಸಲಿದ್ದಾರೆ.