ನವದೆಹಲಿ : ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ನೇಮಕ ಮಾಡಲಾಗಿದೆ.
ಮುಕುಲ್ ರೊಹಟಗಿ ಅಕ್ಟೋಬರ್ 1, 2022 ರಿಂದ ಎರಡನೇ ಬಾರಿಗೆ ಅಟಾರ್ನಿ ಜನರಲ್ ಹುದ್ದೆ ಅಲಂಕರಿಸುತ್ತಿದ್ದಾರೆ. ಈ ಹಿಂದೆ ಜೂನ್ 2014 ರಿಂದ ಜೂನ್ 2017ರ ಅವಧಿಯಲ್ಲಿ ಮೊದಲ ಬಾರಿಗೆ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
ಕಳೆದ ಜೂನ್ ಅಂತ್ಯಕ್ಕೆ ಕೆ.ಕೆ ವೇಣುಗೋಪಾಲ್ ಅಧಿಕಾರಾವಧಿ ಅಂತ್ಯವಾಗಿತ್ತು. ಸರ್ಕಾರ ಮೂರು ತಿಂಗಳ ಅವಧಿಗೆ ಅವರ ಸೇವೆಯನ್ನು ವಿಸ್ತರಿಸಲಾಗಿತ್ತು. ಇದೀಗ ಸೆಪ್ಟೆಂಬರ್ 30ಕ್ಕೆ ಹಾಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವಧಿ ಅಂತ್ಯವಾಗಲಿದೆ.










