ಭಾರತ ಕ್ರಿಕೆಟ್ ತಂಡ ಆಟಗಾರರಿಗೆ ಕಠಿಣ ನಿಯಮಗಳನ್ನು ರೂಪಿಸಿದ ಬಿಸಿಸಿಐ.

48

ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ನೀಡಿದ ಕಳಪೆ ಪ್ರದರ್ಶನದಿಂದ ಬಿಸಿಸಿಐ ತಲೆ ತಗ್ಗಿಸುವಂತೆ ಮಾಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಬೋರ್ಡ್ 10 ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಈ ಮೂಲಕ ಆಟಗಾರರಲ್ಲಿ ಶಿಸ್ತನ್ನು ತರುವ ಪ್ರಯತ್ನದಲ್ಲಿದೆ. ಒಂದೊಮ್ಮೆ ನಿಯಮವನ್ನು ಪಾಲಿಸದೆ ಇದ್ದರೆ ದುಬಾರಿ ದಂಡ ಹೊರಬೇಕಾದ ಪರಿಸ್ಥಿತಿ ಬರಲಿದೆ. ಕಿರಿಯ ಆಟಗಾರರಿಂದ ಹಿಡಿದು ಹಿರಿಯ ಆಟಗಾರರವರೆಗೆ ಎಲ್ಲರಿಗೂ ಇದು ಅನ್ವಯ ಆಗಲಿದೆ. ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ನಮ್ಮ ನೆಲದಲ್ಲೇ 0-3 ಅಂತರದಿಂದ ಸೋತಿತು. ಅಲ್ಲದೆ, ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ 1-3 ಅಂತರದಿಂದ ಸೋಲು ಅನುಭವಿಸಿತು. ಈ ಸೋಲಿನಿಂದಾಗಿ ಭಾರತ ವಲ್ರ್ಡ್ ಟೆಸ್ಟ್ ಚಾಂಪಿಯನ್ಸ್ ರೇಸ್‍ನಿಂದ ಹೊರ ಬಿದ್ದಿದೆ. ಈ ಬೆನ್ನಲ್ಲೇ ಬಿಸಿಸಿಐ ಕಠಿಣ ನಿಯಮವನ್ನು ತರಲು ಮುಂದಾಗಿದೆ. ಎಲ್ಲ ಆಟಗಾರರು ದೇಶಿಯ ಪಂದ್ಯಗಳನ್ನು ಆಡಲೇಬೇಕು ಎಂದು ಬಿಸಿಸಿಐ ತಿಳಿಸಿದೆ. ಇದರಿಂದ ಆಟಗಾರರು ಫಾರ್ಮ್ ಉಳಿಸಿಕೊಳ್ಳಲು, ತರಬೇತಿ ಪಡೆಯಲು ಸಹಾಯ ಆಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ದೇಶಿಯ ಸರಣಿ ಸಹಕಾರಿ ಆಗಲಿದೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಪ್ರ್ಯಾಕ್ಟೀಸ್ ಮ್ಯಾಚ್‍ಗಳಿಗೆ ಕೆಲ ಆಟಗಾರರು ಪ್ರತ್ಯೇಕವಾಗಿ ಬರುತ್ತಿದ್ದರು. ಇದಕ್ಕೆ ಈಗ ಕಡಿವಾಣ ಹಾಕಲಾಗಿದೆ. ಈ ಮೂಲಕ ಶಿಸ್ತನ್ನು ತರಲು ಬಿಸಿಸಿಐ ಪ್ರಯತ್ನಿಸಿದೆ. ತೀರ ಅಗತ್ಯ ಬಿದ್ದಲ್ಲಿ ಹೆಡ್ ಕೋಚ್‍ನ ಅನುಮತಿ ಪಡೆಯಬೇಕು. ಇನ್ನು ತರಬೇತಿ ವೇಳೆ ಎಲ್ಲರೂ ಹಾಜರಿ ಹಾಕಬೇಕು. ಸರಿಯಾದ ಸಮಯಕ್ಕೆ ಇರುವುದು ಕೂಡ ಕಡ್ಡಾಯವಾಗಿದೆ. ಸೀರಿಸ್ ವೇಳೆ ಜಾಹೀರಾತು ಶೂಟಿಂಗ್ ಹಾಗೂ ಬ್ರ್ಯಾಂಡ್‍ಗಳ ಪ್ರಚಾರಕ್ಕೆ ಬ್ರೇಕ್ ಪಡೆಯುವುದರ ಮೇಲೆ ಕಡಿವಾಣ ಹಾಕಲಾಗಿದೆ. ಈ ಮೂಲಕ ಕ್ರಿಕೆಟ್ ಮೇಲೆ ಆಟಗಾರರ ಗಮನ ಹರಿಸಬೇಕು. ಬ್ಯಾಗೇಜ್ ಪಾಲಿಸಿಯನ್ನು ಕೂಡ ತರಲಾಗಿದ್ದು, ಆಟಗಾರರು ನಿಗದಪಡಿಸಿದ ತೂಕದಲ್ಲೇ ಬ್ಯಾಗ್‍ನ ತರಬೇಕು. ಆಟಗಾರರು ಕರೆತರುವ ಮ್ಯಾನೇಜರ್‍ಗಳು, ಬಾಣಸಿಗ ಅವರೆಲ್ಲರಿಗೂ ಕಡಿವಾಣ ಹಾಕಲಾಗಿದೆ.