ಮಂಗಳೂರು: ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರುಪಾಲು…

52
firstsuddi

ಮಂಗಳೂರು: ವಿಹಾರಕ್ಕಾಗಿ ಕುಟುಂಬ ಸಮೇತರಾಗಿ ಆಗಮಿಸಿದ್ದ ಮೂವರು ಯುವಕರು ನೀರುಪಾಲಾದ ಘಟನೆ ನಿನ್ನೆ ಸಂಜೆ ಪಣಂಬೂರ್ ಬೀಚ್ ನಲ್ಲಿ ನಡೆದಿದೆ.

ನೀರುಪಾಲಾದ ಯುವಕರನ್ನು ಬಜ್ಪೆ ಪೋರ್ಕೊಡಿ ನಿವಾಸಿಗಳಾದ ಮಿಲನ್ (20), ಲಿಖಿತ್ (18) ಮತ್ತು ನಾಗರಾಜ್ (24) ಎಂದು ಗುರುತಿಸಲಾಗಿದೆ

ಪಣಂಬೂರು ಬೀಚ್ ನಲ್ಲಿ ಕಡಲೋತ್ಸವ ನಡೆಯುತ್ತಿದ್ದು, ಇದಕ್ಕಾಗಿ ಸಾವಿರಾರು ಮಂದಿ ಭಾಗವಹಿಸಿದ್ದರು. ನಿನ್ನೆ ಭಾರೀ ಗಾಳಿ ಇದ್ದು, ಕಡಲಿನ ಅಬ್ಬರದ ಪರಿಣಾಮ ಸಮುದ್ರ ಸಾಹಸ ಕ್ರೀಡೆಗಳನ್ನು ನಿಲ್ಲಿಸಲಾಗಿತ್ತು ಮತ್ತು ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಯುವಕರು ಸೆಕ್ಯೂರಿಟಿ ಗಾರ್ಡ್ ಗಳ ಕಣ್ಣುತಪ್ಪಿಸಿ ಸಮುದ್ರಕ್ಕೆ ಈಜಾಡಲು ತೆರಳಿದ್ದು ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿದ್ದು, ನೀರುಪಾಲಾದ ಯುವಕರ ಪತ್ತೆ ಕಾರ್ಯ ನಡೆದಿದೆ.