ಹಾಸನ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಿನ್ನೆಲೆ, ಹಾಸನ ರೈಲ್ವೇ ನಿಲ್ದಾಣದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಶ್ವಾನದಳದಿಂದ ರೈಲ್ವೆ ನಿಲ್ದಾಣವನ್ನು ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ರೈಲ್ವೆ ಪೊಲೀಸರು ಪ್ರಯಾಣಿಕರ ಬ್ಯಾಗ್‍ಗಳನ್ನೂ ತಪಾಸಣೆ ಮಾಡಿ ಬಳಿಕ ಪ್ರಯಾಣಿಕರನ್ನು ನಿಲ್ದಾಣದ ಒಳಗೆ ಬಿಡುತ್ತಿದ್ದಾರೆ.









