ಮಂಗಳೂರು : ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರ ಬಂಧನ…

102
Firstsuddi

ಮಂಗಳೂರು : ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತೋಕೂರು ನಿವಾಸಿ ಹರೀಶ್ (42) ಮತ್ತು ದಡ್ಡಲ್ ಕಾಡ್ ಬಂಟ್ವಾಳ ನಿವಾಸಿ ಲೋಕನಾಥ್ ಪೂಜಾರಿ @ ನವೀನ್ (42) ಎಂದು ಗುರುತಿಸಲಾಗಿದೆ.

ಮಂಗಳೂರು ತಾಲ್ಲೂಕು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದ ಬಿಎಎಸ್ಎಫ್ ಫ್ಯಾಕ್ಟರಿಯ ಎದುರುಗಡೆಯ ಫೆರಾವೊ ಕಾಂಪ್ಲೇಕ್ಸ್ ನಲ್ಲಿರುವ ಫೆರಾವೊ ಲಾಡ್ಜಿಂಗ್ & ಬೋರ್ಡಿಂಗ್ ನಲ್ಲಿ ಆರೋಪಿಗಳು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುರತ್ಕಲ್ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.