ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಟೊಮೆಟೊ ಜ್ವರ – ಇದರ ಲಕ್ಷಣಗಳೇನು?

68
firstsuddi

ತಿರುವನಂತಪುರಂ : ಕೇರಳದಲ್ಲಿ ಶವರ್ಮಾ ಸೇವಿಸಿದ 16 ವರ್ಷದ ಬಾಲಕಿಯೊಬ್ಬಳು ಶಿಗೆಲ್ಲಾ ಬ್ಯಾಕ್ಟೀರಿಯಾದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ನಿಗೂಢ ಕಾಯಿಲೆ ಕಾಣಿಸಿಕೊಂಡಿದ್ದು, ಇದನ್ನು ವೈದ್ಯರು ‘ಟೊಮೆಟೋ ಜ್ವರ’ ಎಂದು ಕರೆಯುತ್ತಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, 80 ಕ್ಕೂ ಹೆಚ್ಚು ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಈ ಎಲ್ಲ ಪ್ರಕರಣಗಳು ಕೊಲ್ಲಂನಲ್ಲಿ ವರದಿಯಾಗಿವೆ.

ಟೊಮೆಟೊ ಜ್ವರ ಎಂದರೇನು?
ಇದು ಕೆಂಪು-ಬಣ್ಣದ ದದ್ದುಗಳು, ಚರ್ಮದ ಕಿರಿಕಿರಿ ಉಂಟುಮಾಡುತ್ತದೆ. ಈ ಕಾಯಿಲೆ ಬಂದಾಗ ಟೊಮೆಟೊ ಗಾತ್ರದ ಗುಳ್ಳೆಗಳು ಬಂದು ಅವು ಕೆಂಪು ಬಣ್ಣಕ್ಕೆ ತಿರುಗುತ್ತೆ. ಅದಕ್ಕೆ ಇದನ್ನು ಟೊಮೆಟೊ ಜ್ವರ ಎಂದು ಕರೆಯಲಾಗಿದೆ. ಈ ಟೊಮೆಟೊ ಜ್ವರ ಕೇರಳದಲ್ಲಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ರೋಗದ ಲಕ್ಷಣಗಳೇನು? : ಈ ರೋಗದ ಲಕ್ಷಣಗಳೆಂದರೆ ಅಧಿಕ ಜ್ವರ, ದೇಹದಲ್ಲಿ ನೋವು, ಕೀಲು ಊತ ಮತ್ತು ಆಯಾಸ ಇರುತ್ತೆ.