ಇದೇ ಮೊದಲು ; ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ 1.53 ಕೋಟಿ ರೂ. ಸಂಗ್ರಹ…

62
firstsuddi

ಉಡುಪಿ : ದಕ್ಷಿಣ ಭಾರತದ ಪ್ರಸಿದ್ದ ದೇವಾಲಯವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವರ ದರ್ಶನಕ್ಕೆ ಕೋವಿಡ್ ನಿರ್ಬಂಧಗಳ ಸಡಿಲಿಕೆ ನಂತರ ಜನಸಾಗರ ಹರಿದು ಬರುತ್ತಿದೆ. ನಿನ್ನೆ(ಮೇ 10) ಕಾಣಿಕೆ ಹುಂಡಿಯ ಎಣಿಕೆ ನಡೆದಿದ್ದು, 1,53,41,923 ರೂ. ಸಂಗ್ರಹವಾಗಿದೆ. 2,500 ಕೆಜಿ ಬಂಗಾರ ಮತ್ತು 4,200 ಕೆಜಿ ಬೆಳ್ಳಿ ಕೂಡ ಸಂಗ್ರಹ ಮಾಡಲಾಗಿದೆ. ದೇಗುಲದಲ್ಲಿ 1.53 ಕೋಟಿ ರೂ. ಕಾಣಿಕೆ ರೂಪದಲ್ಲಿ ಇದೇ ಮೊದಲ ಬಾರಿಗೆ ಹಣ ಸಂಗ್ರಹವಾಗಿದೆ.

ಸಾಮಾನ್ಯವಾಗಿ ಪ್ರತೀ ತಿಂಗಳು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಹುಂಡಿ ಹಣದ ಲೆಕ್ಕಾಚಾರ ನಡೆಯುತ್ತದೆ. ತಿಂಗಳಿಗೆ ಸರಾಸರಿ 65 ಲಕ್ಷ ರೂ.ಸಂಗ್ರಹ ಆಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆ ಮಾಡಿದಾಗ 1.39 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಹುಂಡಿ ಲೆಕ್ಕಾಚಾರ ನಡೆದಾಗ ಹುಂಡಿಯಲ್ಲಿ 1,53,41,923 ರೂ ನಗದು, 2,500 ಕೆಜಿ ಬಂಗಾರ ಮತ್ತು 4,200 ಕೆಜಿ ಬೆಳ್ಳಿ ಸಂಗ್ರಹ ಆಗಿದೆ ಎಂದು ತಿಳಿದು ಬಂದಿದೆ.