ಚಿಕ್ಕಬಳ್ಳಾಪುರ: ತಂದೆಯೊಬ್ಬ ತನ್ನ ಮಗನ ಕೈ ಕಾಲು ಕಟ್ಟಿ ಪೆಟ್ರೋಲ್ ಸುರಿದು ನಂತರ ಬೆಂಕಿ ಹಚ್ಚಿದ ಘಟನೆಯೊಂದು ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುತ್ರ ಆದರ್ಶ್(28) ಮೃತ ವ್ಯಕ್ತಿ. ಆದರ್ಶ್ ದಿನವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇತ್ತೀಚೆಗೆ ತಾಯಿಯ ಬಳಿ ಹಣ ಕೇಳಿದಾಗ ಕೊಡಲಿಲ್ಲವೆಂದು ಆಕೆಯ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಬೇಸತ್ತಿದ್ದ ತಂದೆ ಜಯರಾಮಯ್ಯ ಮಗನ ಕೈಕಾಲು ಕಟ್ಟಿಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










