ಮಗುವನ್ನು ಅಪಹರಿಸಲು ಯತ್ನಿಸಿದ ಕಳ್ಳನನ್ನು ಬೆನ್ನಟ್ಟಿ ಹಿಡಿದ ತಾಯಿ!

67
firstsuddi

ವಿಜಯಪುರ : ನಾಲ್ಕು ವರ್ಷದ ಮಗುವೊಂದನ್ನು ಅಪಹರಿಸಲು ಯತ್ನಿಸಿದ ಕಳ್ಳನನ್ನು ಮಗುವಿನ ತಾಯಿಯೇ ಬೆನ್ನಟ್ಟಿ ಹಿಡಿದ ಘಟನೆ ನಗರದ ಬಸವನಗರದಲ್ಲಿ ನಡೆದಿದೆ.

ಅಂಗಡಿಗೆ ಬಂದಿದ್ದ ಸಂತೋಷ್ ಮತ್ತು ರೇಣುಕಾ ಎಂಬ ದಂಪತಿಯ ಮಗನನ್ನು ಯಾರಿಗೂ ಗೊತ್ತಾಗದಂತೆ ಕಳ್ಳತನ ಮಾಡಿ ಆರೋಪಿ ಪರಾರಿಯಾಗುತ್ತಿದ್ದ. ಬಾಲಕ ಅಳುವ ಧ್ವನಿ ಕೇಳಿದ ತಾಯಿ ರೇಣುಕಾ ಕಳ್ಳನನ್ನು ಬೆನ್ನಟ್ಟಿ ಹಿಡಿದು ತನ್ನ ಮಗನನ್ನು ರಕ್ಷಿಸಿಕೊಂಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಜಮಾವಣೆಗೊಂಡ ಸ್ಥಳೀಯರು ಕಳ್ಳನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.