ಧಾರವಾಡ : ನಡೆದಾಡುವ ದೇವರು ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಜಿಲ್ಲೆಯ ಕೆಲಗೇರಿ ಬಡಾವಣೆಯ ಪರಿಸರ ಪ್ರೇಮಿ ಕಲಾವಿದ ಮಂಜುನಾಥ್ ಹಿರೇಮಠ ಅವರು ವಿಶೇಷ ಗೌರವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಂಜುನಾಥ್ ಹಿರೇಮಠ, 11 ಕೆಜಿ ಜೇಡಿ ಮಣ್ಣಿನಲ್ಲಿ ಎರಡು ಅಡಿ ಎತ್ತರದ ಸಿದ್ದೇಶ್ವರ ಶ್ರೀಗಳ ಕಲಾಕೃತಿಯನ್ನು ರಚಿಸಿ ಶ್ರೀಗಳಿಗೆ ಕಲಾನಮನ ಸಲ್ಲಿಸಿದ್ದಾರೆ. ಬಳಿಕ ಆ ಕಲಾಕೃತಿಯನ್ನು ಕೆಲಗೇರಿ ನಿವಾಸಿಗಳು ಶ್ರೀಕಲ್ಮೇಶ್ವರ ದೇಗುಲದಲ್ಲಿರಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.










