ನವದೆಹಲಿ : 1971ರಲ್ಲಿ ಭಾರತಕ್ಕೆ ಪಾಕಿಸ್ತಾನದ ಸೈನ್ಯ ಶರಣಾಗತಿಗೆ ಸಹಿ ಹಾಕಿದ ಫೋಟೋವನ್ನು ತಾಲಿಬಾನ್ ಹಂಚಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿದೆ.
ತಾಲಿಬಾನ್ ನಾಯಕ ಅಹಮದ್ ಯಾಸಿರ್ ಟ್ವೀಟ್ ಮೂಲಕ ಪಾಕಿಸ್ತಾನಕ್ಕೆ ಚಾಟಿ ಬೀಸಿದ್ಧಾರೆ. ಅದ್ಭುತ ಸರ್! ಸಿರಿಯಾದಲ್ಲಿರುವ ಕುರ್ದಿಗಳನ್ನು ಗುರಿಯಾಗಿಸಲು ಅಫ್ಘಾನಿಸ್ತಾನ ಟರ್ಕಿಯಲ್ಲ. ಇದು ಅಫ್ಘಾನಿಸ್ತಾನ, ಹೆಮ್ಮೆಯ ಸಾಮ್ರಾಜ್ಯ. ನಮ್ಮ ಮೇಲೆ ಮಿಲಿಟರಿ ದಾಳಿಯ ಬಗ್ಗೆ ಯೋಚಿಸಬೇಡಿ, ಇಲ್ಲದಿದ್ದರೆ ಭಾರತದೊಂದಿಗಿನ ಮಿಲಿಟರಿ ಒಪ್ಪಂದ ಪುನರಾವರ್ತನೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪೋಸ್ಟ್ ಜೊತೆಗೆ, ಅಹ್ಮದ್ ಯಾಸಿರ್ ಡಿಸೆಂಬರ್ 16, 1971ರ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ, ಪಾಕಿಸ್ತಾನದ ಸೇನೆಯ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಮುಖ್ಯ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್ ಸರೆಂಡರ್ ಆಫ್ ಇನ್ಸ್ಟ್ರುಮೆಂಟ್ ಗೆ ಸಹಿ ಹಾಕಿರುವುದನ್ನು ಕಾಣಬಹುದು. ಢಾಕಾದಲ್ಲಿ ಬಾಂಗ್ಲಾದೇಶದ ವಿಮೋಚನೆಗೆ ಭಾರತ ಸಹಾಯ ಮಾಡಿದ ದಿನವನ್ನು ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.










