ಮದುವೆಗೆ ನಿರಾಕರಣೆ: ರೈಲಿಗೆ ತಲೆಕೊಟ್ಟು ಜೀವ ಕಳೆದುಕೊಂಡ ಪ್ರೇಮಿಗಳು…

56
firstsuddi

ರಾಮನಗರ: ಪೋಷಕರು ಮದುವೆಗೆ ನಿರಾಕರಿಸಿದ ಹಿನ್ನಲೆಯಲ್ಲಿ ಮನನೊಂದು ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು ಜೀವ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಹೊರವಲಯದ ಕುಂಬಾಪುರ ಗೇಟ್ ಬಳಿ ನಡೆದಿದೆ.

ಹರ್ಷವರ್ಧನ್ (20), ನೆಲಮಂಗಲ ಮೂಲದ ನವ್ಯಶ್ರೀ (19) ಆತ್ಮಹತ್ಯೆ ಮಾಡಿಕೊಂಡವರು. ನವ್ಯ ಹಾಗೂ ಹರ್ಷವರ್ಧನ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮನನೊಂದ ಪ್ರೇಮಿಗಳು ಬೈಕ್‍ನಲ್ಲಿ ರಾಮನಗರ ಹೊರವಲಯದ ಕುಂಬಾಪುರ ಗೇಟ್ ಬಳಿಗೆ ಬಂದು ಬೈಕ್ ದೂರದಲ್ಲಿ ನಿಲ್ಲಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ದೇಹದ ಮೇಲೆ ರೈಲು ಹರಿದ ಪರಿಣಾಮ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಚನ್ನಪಟ್ಟಣ ರೈಲ್ವೇ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.