ಮದ್ಯಸೇವನೆ ಬೇಡವೆಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮಗ ಆತ್ಮಹತ್ಯೆ…

49
firstsuddi

ರಾಯಚೂರು: ಮದ್ಯಸೇವನೆ ಮಾಡಬೇಡವೆಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

24 ವರ್ಷದ ಆದರ್ಶ ಆತ್ಮಹತ್ಯೆಗೆ ಶರಣಾದ ಯುವಕ. ನಿತ್ಯ ಮದ್ಯಪಾನ ಸೇವಿಸಿ ಮನೆಗೆ ಬರುತ್ತಿದ್ದ ಮಗನ ವರ್ತನೆಯಿಂದ ಪೋಷಕರು ಬೇಸತ್ತಿದ್ದರು. ಇದೇ ವಿಚಾರಕ್ಕೆ ಬೈದು ಬುದ್ದಿವಾದ ಹೇಳಿದ್ದರು. ಬುದ್ದಿವಾದವನ್ನೇ ಅವಮಾನ ಎಂದು ತಿಳಿದು ಬಾತ್ ರೂಂನ ಪೈಪ್‌ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.