ಬೀಜಿಂಗ್ : ಚೀನಾದಲ್ಲಿ ಇದೇ ಮೊದಲ ಬಾರಿಗೆ ಹಕ್ಕಿಜ್ವರ ಹೆಚ್3ಎನ್8 ತಳಿ ಸೋಂಕು ಮನುಷ್ಯನಲ್ಲಿ ಪತ್ತೆಯಾಗಿದೆ.
ಇದೇ ಮೊದಲ ಬಾರಿಗೆ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ನಾಲ್ಕು ವರ್ಷದ ಬಾಲಕನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಬಾಲಕ ಯಾರೊಂದಿಗೂ ಸಂಪರ್ಕ ಹೊಂದಿಲ್ಲ. ಆದರೆ ಮನೆಯಲ್ಲಿದ್ದ ಕೋಳಿ ಮತ್ತು ಕಾಗೆಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದು ತಿಳಿಸಲಾಗಿದೆ.
ಹೆಚ್3ಎನ್8 ರೂಪಾಂತರ ವೈರಸ್ ಈ ಹಿಂದೆ ವಿಶ್ವದ ಹಲವೆಡೆ ಕುದುರೆ, ಶ್ವಾನ ಹಾಗೂ ಪಕ್ಷಿಗಳಲ್ಲಿ ಪತ್ತೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಚೀನಾದಲ್ಲಿ ಮಾನವನಲ್ಲಿ ಪತ್ತೆಯಾಗಿದೆ. ಆದರೆ ಈ ಸೋಂಕಿನ ಹರಡುವಿಕೆಯ ತೀವ್ರತೆ ಕಡಿಮೆ ಇದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‍ಎಚ್‍ಸಿ) ತಿಳಿಸಿದೆ.










