ಪ್ರಯಾಗ್‍ರಾಜ್: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಈವರೆಗೆ 43 ಕೋಟಿ ಜನ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. 144 ವರ್ಷಗಳ ಬಳಿಕ ಪ್ರಯಾಗ್‍ರಾಜ್‍ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಜನವರಿ 13 ರಿಂದ ಮಹಾಕುಂಭಮೇಳ ಆರಂಭವಾಗಿದ್ದು, ಆಧ್ಯಾತ್ಮ, ಭಕ್ತಿ ಭಾವದ ಕೇಂದ್ರವಾಗಿರುವ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಸಾಧು ಸಂತರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಇನ್ನು ಈ ಮಹಾ ಕುಂಭಮೇಳ ಫೆಬ್ರವರಿ 26ರ ಮಹಾಶಿವರಾತ್ರಿ ವರೆಗೆ ನಡೆಯಲಿದೆ.










