ಮೋದಿ ಇಲ್ಲದೇ ಬಿಜೆಪಿಗೆ ಯಾರೂ ಇಲ್ಲವೆ, ಮೊದಲು ಪ್ರಧಾನಿ ಬದಲಿಸಿ: ಸಚಿವ ಸಂತೋಷ್ ಲಾಡ್.

47

ಹಾಸನ: ಮೋದಿ ಅವರಿಗೆ 74 ವರ್ಷ ವಯಸ್ಸಾಗಿದೆ. ಗಡ್ಕರಿ ಅಥವಾ ಬೇರೆ ಯಾರಿಗಾದರು ಪ್ರಧಾನಿ ಹುದ್ದೆ ನೀಡಲಿ. ಸಾಹೇಬ್ರು ಪ್ರಚಾರಕ್ಕೆ ರೂಪಾಯಿ 6.5 ಸಾವಿರ ಕೋಟಿ ಖರ್ಚು ಮಾಡುತ್ತಾರೆ. ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಾರೆ, 16 ಗಂಟೆ ಕೆಲಸ ಮಾಡ್ತಾರೆ ಅಂತಾರೆ, ಆದರೆ ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ, ಹಾಗಾಗಿ ಬಿಜೆಪಿಯವರಿಗೆ ಕೈ ಮುಗಿದು ಕೇಳುವೆ, ದೇಶದ ಮಹಾರಾಜ ಎನಿಸಿಕೊಳ್ಳುವ ಪ್ರಧಾನಿ ಮೋದಿ ಅವರನ್ನು ಬದಲು ಮಾಡಿ, ಇದೇ ದೇಶಕ್ಕೆ ಸಿಗುವ ಪರಿಹಾರ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮೋದಿ ಬಗ್ಗೆ ವ್ಯಂಗ್ಯ ಮಾಡಿದರು. ಹಾಸನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶ ಯಾವ ಪಕ್ಷದ ಸ್ವತ್ತಲ್ಲ. ಬಿಜೆಪಿ ಅಥವಾ ಕಾಂಗ್ರೆಸ್‍ಗೆ ಈ ದೇಶವನ್ನು ಒಪ್ಪಿಸಲು ಸಾಧ್ಯವಿಲ್ಲ. ಬಿಜೆಪಿಯವರಿಗೆ ಕೈ ಮುಗಿದು ಕೇಳುತ್ತೇನೆ. ಮೊದಲು ನಿಮ್ಮ ಮಹಾರಾಜನಾಗಿರುವ ದೇಶದ ಪ್ರಧಾನಿಯನ್ನು ಬದಲಾಯಿಸಿ. ಇದರಿಂದ ದೇಶದಕ್ಕೆ ಪರಿಹಾರ ಸಿಗುತ್ತದೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿ ಅಮೆರಿಕದಿಂದ ಕಾಲಿಗೆ ಚೈನ್ ಹಾಕಿಕೊಂಡು ದೇಶದ ಜನರನ್ನು ತಂದು ಬಿಸಾಕಿದ್ದು ಇಡೀ ದೇಶಕ್ಕೆ ಅವಮಾನ ಮಾಡಿದರು. ಭಾರತದಲ್ಲಿ 18 ಲಕ್ಷ ಜನ ಪಾಸ್‌ಪೋರ್ಟ್ ಸರೆಂಡರ್ ಮಾಡಿದ್ದಾರೆ. ಆದರೆ, ಇದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ. ಕಳೆದ 11 ವರ್ಷದಿಂದ ಏನನ್ನೂ ಮಾಡಿಲ್ಲ. ಅವರ ಕಣ್ಣುಗಳು ಹೊಳೆಯುತ್ತಿವೆ. ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ ಎಂದು ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕತೆ ಕುಸಿದಿರುವ ಬಗ್ಗೆ ಲಾಡ್ ಆಕ್ಷೇಪ ವ್ಯಕ್ತಪಡಿಸಿದಲ್ಲದೇ, ಪ್ರಧಾನಮಂತ್ರಿ ಮೋದಿಯವರ ಜೀವನಶೈಲಿ ಕುರಿತು ಕಿಡಿಕಾರಿದರು.