ಮಹಾ ರಾಜಕೀಯ ಬಿಕ್ಕಟ್ಟು : ಸೂರತ್‌ನಿಂದ ಗುವಾಹಟಿಗೆ ತೆರಳಿದ ಶಿವಸೇನಾ ಶಾಸಕರು.

54
firstsuddi

ನವದೆಹಲಿ : ಮಹಾರಾಷ್ಟ್ರದ ಬಂಡಾಯ ಸಚಿವ ಏಕನಾಥ್ ಶಿಂಧೆ ಮತ್ತು ಸುಮಾರು 40 ಬಂಡಾಯ ಶಿವಸೇನೆ ಶಾಸಕರು ಸೋಮವಾರ ರಾತ್ರಿ ಗುಜರಾತ್ ನ ಸೂರತ್ ನಲ್ಲಿರುವ ಹೋಟೆಲ್ ನಲ್ಲಿ ತಂಗಿದ್ದರು. ಈಗ, ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಸೂರತ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿಂಧೆ, ನಾವು ಬಾಳಾ ಸಾಹೇಬ್ ಅವರ ಅನುಯಾಯಿಗಳು. ಬಾಳಾ ಠಾಕ್ರೆ ಅವರು ನಮಗೆ ಹಿಂದುತ್ವದ ಪಾಠ ಮಾಡಿದ್ದಾರೆ. ಆ ಸಿದ್ಧಾಂತಕ್ಕೆ ಅನುಗುಣವಾಗಿ ಈಗಿನ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಆದರೆ ನಾವು ಶಿವಸೇನೆಯನ್ನು ತೊರೆಯುವುದಿಲ್ಲ ಎಂದು ಹೇಳಿದ್ದಾರೆ.

ನಿನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳುಹಿಸಿದ ಶಿವಸೇನಾ ಮುಖಂಡರಾದ ಮಿಲಿಂದ್ ನಾರ್ವೇಕರ್ ಮತ್ತು ರವೀಂದ್ರ ಫಾಟಕ್ ಅವರು ಹೋಟೆಲ್ ನಲ್ಲಿ ಬಂಡಾಯ ಶಾಸಕರರೊಂದಿಗೆ ಚರ್ಚೆ ನಡೆಸಿದರು. ಆದರೆ, ಮಾತುಕತೆ ವಿಫಲವಾಗಿದೆ ಎನ್ನಲಾಗ್ತಿದೆ.

ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರ ಬೆಂಬಲಿತ ಅಭ್ಯರ್ಥಿಗೆ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿತ್ತು. ಇದಕ್ಕೆ ಅಡ್ಡಮತದಾನ ಕಾರಣ ಎಂದು ವಿಶ್ಲೇಷಿಸಲಾಗಿದೆ. ಚುನಾವಣೆ ಫಲಿತಾಂಶದ ಬಳಿಕ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.