ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿದ್ದ ಕಾಮುಕನ ಕಾಲಿಗೆ ಗುಂಡೇಟು…

58
firstsuddi

ಬೆಂಗಳೂರು: ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಕಾಮುಕನ ಕಾಲಿಗೆ ಪೊಲೀಸರು ಗುಂಡೇಟು ನೀಡಿರುವ ಘಟನೆ ನಗರದ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ.

ಬ್ಯಾಟರಾಯನದೊಡ್ಡಿಯ ಆರೋಪಿ ಸೋಮಶೇಖರ್ ಎಂಬಾತನನ್ನು ಇಂದು ಬೆಳಗ್ಗೆ ಸ್ಥಳ ಮಹಜರಿಗೆ ಕರೆದೊಯ್ಯುವಾಗ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

ಆರೋಪಿ ಸೋಮ, ಪಿಸಿ ಮಾದಪ್ಪ ಮೇಲೆ ಡ್ಯಾಗರ್​ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಉಳಿದ ಪೊಲೀಸರು ಆತನನ್ನು ಸುತ್ತುವರೆದರು. ಬಳಿಕ ಅವರ ಮೇಲೂ ಆತ ಹಲ್ಲೆಗೆ ಮುಂದಾದಾಗ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್, ಪಿಸ್ತೂಲ್‍ನಿಂದ ಸೋಮನ ಎಡಗಾಲಿಗೆ ಗುಂಡು ಹಾರಿಸಿದರು. ಗುಂಡೇಟು ತಿಂದ ಆರೋಪಿಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿವರ:
ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯಲ್ಲಿ ಮನೆಯಿಂದ ಹೊರಹೋದ ಮುನಿರತ್ನ(38) ಎಂಬ ಮಹಿಳೆಯ ಮೇಲೆ ಕಾಮುಕ ಸೋಮ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದ. ಮಹಿಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು. ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಗೊತ್ತಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ಕು ತಂಡಗಳನ್ನು ರಚನೆ ಮಾಡಿ, ತನಿಖೆ ನಡೆಸಿದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು.