‘ಮಾರ್ಕ್ ಆ್ಯಂಟನಿ’ ಚಿತ್ರದ ಶೂಟಿಂಗ್ ವೇಳೆ ಅವಘಡ – ಕೂದಲೆಳೆ ಅಂತರದಲ್ಲಿ ವಿಶಾಲ್ ಪಾರು…

62
firstsuddi

ಕಾಲಿವುಡ್ ನಟ ವಿಶಾಲ್ ನಟಿಸುತ್ತಿರುವ `ಮಾರ್ಕ್ ಆ್ಯಂಟನಿ’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ದೊಡ್ಡ ಅಪಘಾತದಿಂದ ವಿಶಾಲ್ ಅವರು ಪಾರಾಗಿದ್ದಾರೆ.

ಇತ್ತೀಚೆಗೆ ಚೆನ್ನೈನ ಸ್ಟುಡಿಯೋದರಲ್ಲಿ ‘ಮಾರ್ಕ್ ಆ್ಯಂಟನಿ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾಗಾಗಿ ಲಾರಿಗೆ ಸಂಬಂಧಿಸಿದ ದೃಶ್ಯವನ್ನು ಚಿತ್ರತಂಡ ಸೆರೆಹಿಡಿಯಲಾಗುತ್ತಿತ್ತು. ಈ ವೇಳೆ ಲಾರಿ ಡ್ರೈವರ್ ನಿಯಂತ್ರಣ ತಪ್ಪಿದ್ದು, ಎಲ್ಲಿ ಲಾರಿ ನಿಲ್ಲಬೇಕೋ ಅಲ್ಲಿ ನಿಲ್ಲದೆ ಮುಂದಕ್ಕೆ ನುಗ್ಗಿದೆ. ಅಲ್ಲೇ ಕೆಳಗಡೆ ಮಲಗಿದ್ದ ವಿಶಾಲ್ ಅವರ ಪಕ್ಕದಲ್ಲೇ ಲಾರಿ ಹಾದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅವಘಡ ಸಂಭವಿಸಿದ ಸ್ಥಳದಲ್ಲಿ ವಿಶಾಲ್ ಅವರು ಸೇರಿದಂತೆ ಅನೇಕ ಸಹ ಕಲಾವಿದರು, 100ಕ್ಕೂ ಹೆಚ್ಚು ಕಾರ್ಮಿಕರು, ತಂತ್ರಜ್ಞರು ಇದ್ದರು. ಲಾರಿ ನಿಯಂತ್ರಣ ಕಳೆದುಕೊಂಡು ತಮ್ಮ ಬಳಿ ಬರುತ್ತಿರುವುದನ್ನು ನೋಡಿ ಅದರಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅಪಘಾತದ ವಿಡಿಯೋ ಸೊಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ವಿಶಾಲ್ ಅಪಘಾತದಿಂದ ಪಾರಾಗಿರುವ ವಿಚಾರ ತಿಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ವಿಚಾರವಾಗಿ ಖುದ್ದು ವಿಶಾಲ್ ಅವರು ಮಾಹಿತಿ ನೀಡಿದ್ದಾರೆ.

ಕೆಲವೇ ಕ್ಷಣ ಸ್ವಲ್ಪವೇ ದೂರದಲ್ಲಿ ನನ್ನ ಸಾವು ಕಾಣಿಸಿತು. ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಅವಘಡದಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಸ್ವಲ್ಪ ಸಮಯದ ಬಳಿಕ ಮತ್ತೆ ಶೂಟಿಂಗ್ ಮುಂದುವರೆಸಲಾಯಿತು ಎಂದು ವಿಶಾಲ್ ಅವರು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.