ರಾಯಚೂರು : ಮಾವನ ನಿವೃತ್ತಿ ಹಣಕ್ಕಾಗಿ ಪತ್ನಿಯ ಕುತ್ತಿಗೆ ಬಿಗಿದು ಪತಿ ಕೊಲೆ ಮಾಡಿರುವ ಘಟನೆ ನಗರದ ಅಂದ್ರೂನ್ ಕಿಲ್ಲಾದಲ್ಲಿ ನಡೆದಿದೆ.
ಆಸ್ಮಾ ಬಾನು ಕೊಲೆಯಾದ ಮಹಿಳೆ. ಆಸ್ಮಾ ಹಾಗೂ ಫಸಲುದ್ದೀನ್ ಗೆ ಮದ್ವೆಯಾಗಿ ಒಂಬತ್ತು ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಮೃತ ಆಸ್ಮಾ ಬಾನು ತಂದೆ ಕೆಎಸ್ ಆರ್ ಟಿಸಿ ನಿವೃತ್ತ ನೌಕರ. ತಂದೆಗೆ ಬಂದಿರುವ ನಿವೃತ್ತಿ ಹಣ ತೆಗೆದುಕೊಂಡು ಬರುವಂತೆ ಆಸ್ಮಾಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತ ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಫಸಲುದ್ದೀನ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.










