ಮುಂಬೈ (ಮಹಾರಾಷ್ಟ್ರ): ಮುಂಬೈನಲ್ಲಿ ನಿನ್ನೆ ಮತ್ತಿಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಒಮಿಕ್ರಾನ್ ಪತ್ತೆಯಾದ ಇಬ್ಬರೂ ಕೂಡ ಫೈಜರ್ ಕೊವಿಡ್ 19 ಲಸಿಕೆ ಪಡೆದವರಾಗಿದ್ದು, ಸದ್ಯಕ್ಕೆ ಯಾವುದೇ ಲಕ್ಷಣಗಳೂ ಇಲ್ಲ. ಇಬ್ಬರನ್ನೂ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರಿಬ್ಬರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಿಂದ ಮುಂಬೈಗೆ ಆಗಮಿಸಿದ್ದು, ಹಾಗೂ ಮತ್ತೊಬ್ಬರು ಅಮೆರಿಕಾದಿಂದ ಬಂದಿದ್ದಾರೆ.
ಡಿಸೆಂಬರ್ 2 ರಂದು ಭಾರತದ ಮೊದಲೆರಡು ಕೇಸ್ ಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. ಇದೀಗ ಮಹಾರಾಷ್ಟ್ರದಲ್ಲಿ 10, ರಾಜಸ್ಥಾನದಲ್ಲಿ 9, ಗುಜರಾತ್ನಲ್ಲಿ 1 ಹಾಗೂ ದೆಹಲಿಯಲ್ಲಿ 1 ಕೇಸ್ ಪತ್ತೆಯಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು 23 ಮಂದಿಗೆ ದೃಢಪಟ್ಟಿದೆ.










