ಬೆಂಗಳೂರು : ಮಾಸ್ಕ್ ವಿಚಾರಕ್ಕಾಗಿ ಮಹಿಳೆಯ ಮೇಲೆ ದೊಣ್ಣೆಯಿಂದ ಯುವತಿ ಹಲ್ಲೆ ಮಾಡಿರುವ ಘಟನೆ ನಗರದ ಸದಾಶಿವನಗರದಲ್ಲಿ ನಡೆದಿದೆ.
ಯುವತಿ ಬೆಳಗ್ಗೆ ಎರಡು ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದಾಗ ಎದುರಿನಿಂದ ಮಹಿಳೆ ಮೂಗಿನಿಂದ ಮಾಸ್ಕ್ ಸರಿಮಾಡಿಕೊಂಡು ಬರುತ್ತಿದ್ದರು. ಮಾಸ್ಕ್ ಮೂಗಿನ ಕೆಳಗೆ ಜಾರಿದೆ ಎಂಬ ಕಾರಣಕ್ಕೆ ಮಹಿಳೆ ಮೇಲೆ ಯುವತಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾಳೆ.
ಮಾಸ್ಕ್ ಹಾಕಿಕೊಂಡಿಲ್ಲ ಅಂದರೆ ದಂಡ ಹಾಕಲು ಪೊಲೀಸರು ಇದ್ದಾರೆ. ದೊಣ್ಣೆಯಲ್ಲಿ ಹೊಡೆಯಲು ನೀನು ಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಆದರೆ ಯುವತಿ ಮಾತ್ರ ಆಕೆ ಮಾಸ್ಕ್ ಏಕೆ ಸರಿ ಹಾಕೊಂಡಿಲ್ಲ ಎಂದು ವಾಗ್ದಾದ ಮಾಡಿದ್ದಾಳೆ. ಯುವತಿಯ ಈ ಹುಚ್ಚಾಟ ನೋಡಿದ ಸ್ಥಳೀಯರು ಕೂಡಲೇ ಸದಾಶಿವನಗರ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಎರಡು ನಾಯಿ ಸಮೇತ ಹಲ್ಲೆ ಮಾಡಿದ ಯುವತಿಯನ್ನು ಹೊಯ್ಸಳ ವಾಹನದಲ್ಲಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನೂ ಹಲ್ಲೆಗೊಳಗಾದ ಯುವತಿ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.










