ಮಿಸೆಸ್ ಏಷ್ಯಾ ಇಂಟರ್‍ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡ ಧಾರವಾಡದ ವೈದ್ಯೆ…

231
firstsuddi

ಧಾರವಾಡ : ಮಯನ್ಮಾರ್‍ನಲ್ಲಿ ನಡೆದ ಕ್ಲಾಸಿಕ್ ಮಿಸೆಸ್ ಏಷ್ಯಾ ಇಂಟರ್‍ನ್ಯಾಷನಲ್ ಸ್ಪರ್ಧೆಯಲ್ಲಿ ಧಾರವಾಡ ಮೂಲದ ವೈದ್ಯೆಯೊಬ್ಬರು ಮಿಸೆಸ್ ಏಷ್ಯಾ ಇಂಟರ್‍ನ್ಯಾಷನಲ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ಧಾರವಾಡದ ಎಸ್‍ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ ಹಾಗೂ ವೈದ್ಯೆಯೂ ಆಗಿರುವ ಡಾ. ಶಿಲ್ಪಾ ಹಕ್ಕಿ ಅವರು ಈ ಸಾಧನೆ ಮಾಡಿದ್ದಾರೆ. ಮಯನ್ಮಾರ್‍ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಜಪಾನ್ ಮತ್ತು ಥೈಲಾಂಡ್ ದೇಶದ ಸ್ಪರ್ಧಿಗಳಿಗೆ ಪೈಪೋಟಿ ನೀಡಿ ಟ್ಯಾಲೆಂಟ್ ಕ್ವೀನ್ ಎಂಬ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಾ. ಶಿಲ್ಪ ಅವರು ಈ ಸ್ಪರ್ಧೆಯಲ್ಲಿ ನಮ್ಮ ಸಾಂಸಕೃತಿಕ ಕಲೆಯಾದ ಭರತನಾಟ್ಯದ ಪೋಷಕ್ ಧರಿಸಿ ತಮ್ಮ ಸಂಸಕೃತಿಯನ್ನು ಬಿಂಬಿಸಿದ್ದರು. ಡಾ. ಶಿಲ್ಪಾ ಅವರು ಇದಕ್ಕೂ ಮೊದಲು ಮಿಸೆಸ್ ಇಂಡಿಯಾ ಕರ್ನಾಟಕ ವಿಭಾಗದಲ್ಲಿ ವಿಜೇತರಾಗಿದ್ದು, ರಾಷ್ಟ್ರೀಯ ವಿಭಾಗದಲ್ಲಿ ಡ್ಯಾನ್ಸಿಂಗ್ ಕ್ವೀನ್ ಎಂಬ ಗೌರವನ್ನು ಪಡೆದುಕೊಳ್ಳುವ ಮೂಲಕ ಏಷ್ಯಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡರು.