ಮುಲ್ಕಿಯಲ್ಲಿ ಉದ್ಯಮಿ ಕೊಲೆ ಪ್ರಕರಣ – ಪೊಲೀಸರಿಂದ ನಾಲ್ವರ ಬಂಧನ…

155
firstsuddi

ಮಂಗಳೂರು: ಮುಲ್ಕಿಯಲ್ಲಿ ದುರ್ಷರ್ಮಿಗಳಿಂದ ಹಲ್ಲೆಗೊಳಪಟ್ಟು ಮೃತರಾದ ಉದ್ಯಮಿ ಅಬ್ದುಲ್ಲತೀಫ್  ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಲ್ಕಿ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಮುಲ್ಕಿ ಕಾರ್ನಾಡ್ ಬಪ್ಪನಾಡು ನಿವಾಸಿ ಮೊಹ್ಮದ್ ಹಾಸಿಮ್ (27), ನಿಸಾರ್ @ರಿಯಾಝ್ (33), ಮೊಹಮ್ಮದ್ ರಾಝೀಂ (24) ಮತ್ತು ಬಡಾ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ (27) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಹತ್ಯಾರು, ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಕಾರಣವಾದ ಅಂಶಗಳ ಬಗ್ಗೆ ಮತ್ತು ದಸ್ತಗಿರಿಗೆ ಬಾಕಿಯಿರುವ ಆರೋಪಿತರ ಪತ್ತೆ ಪ್ರಯತ್ನ ಮುಂದುವರೆಸಿದ್ದಾರೆ.