ದೆಹಲಿ ಮಸೀದಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾದ ಮೋಹನ್ ಭಾಗವತ್.

65
firstsuddi

ನವದೆಹಲಿ : ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಅಹ್ಮದ್ ಇಲ್ಯಾಸಿ ಸೇರಿದಂತೆ ಹಲವು ಮುಸ್ಲಿಂ ಮುಖಂಡರನ್ನು ಇಂದು ಭೇಟಿ ಮಾಡಿದರು. ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಸಭೆ ನಡೆದಿದೆ.

ಮೂಲಗಳ ಪ್ರಕಾರ ಹಿಜಾಬ್ ವಿವಾದ, ಜ್ಞಾನವಾಪಿ ಮತ್ತು ಧರ್ಮಗಳ ನಡುವೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಮುಂತಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಭಾಗವತ್ ಅವರಲ್ಲದೇ ಹಿರಿಯ ಆರ್‌ಎಸ್‍ಎಸ್ ಸದಸ್ಯರಾದ ಡಾ. ಕೃಷ್ಣ ಗೋಪಾಲ್, ಇಂದ್ರೇಶ್ ಕುಮಾರ್, ರಾಮ್‌ಲಾಲ್ ಮತ್ತು ಕರಿಶ್ ಕುಮಾರ್ ಕೂಡ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯು ಸಂವಾದ ಪ್ರಕ್ರಿಯೆಯ ಒಂದು ಭಾಗವಾಗಿದೆ ಎಂದು ಆರ್‌ಎಸ್‍ಎಸ್ ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ.