ಮೂಡಿಗೆರೆ : ಇತ್ತೀಚೆಗೆ ನಿಧನರಾದ ಸಂಗೀತ ನಿರ್ಧೇಶಕ ರಾಜನ್ ಅವರಿಗೆ ಬ್ರಾಹ್ಮಣ ಮಹಾ ಸಭಾ ವತಿಯಿಂದ ಶ್ರದ್ಧಾಂಜಲಿ…

334
firstsuddi

ಮೂಡಿಗೆರೆ : ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳ ನೂರಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಹಿರಿಯ ಸಂಗೀತ ನಿರ್ದೇಶಕ ರಾಜನ್ ತಮ್ಮ ಜೀವನ ಯಾನ ಮುಗಿಸಿದ ಗಾನಗಾರುಡಿಗ ಎಂದು ಬ್ರಾಹ್ಮಣ ಸಂಘದ ಸದಸ್ಯ ವಿಶ್ವೇಶ್ವರ ಭಟ್ ತಿಳಿಸಿದರು

ಪಟ್ಟಣದ ಚೈತನ್ಯ ಮಿನಿಹಾಲ್ ನಲ್ಲಿ ತಾಲ್ಲೂಕು ಬ್ರಾಹ್ಮಣ ಮಹಾ ಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಿ.ರಾಜನ್ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ರಾಜನ್ ಅವರ ಸಹೋದರ ನಾಗೇಂದ್ರ ಮತ್ತು ಹಾಡಿನ ಮೋಡಿಗಾರ ಎಸ್.ಪಿ.ಬಾಲಸುಬ್ರಹ್ಮಣ್ಯ ಈ ಮೂವರ ಜೋಡಿಯಲ್ಲಿ ಹಲವು ಉತ್ತಮ ಗೀತೆಗಳು ಮೂಡಿಬರುವುದರೊಂದಿಗೆ ಇಂದು ಮುಂದೆ ಎಂದೆದಿಗೂ ಜನರ ಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಓಲ್ಡ್ ಈಸ್ ಗೋಲ್ಡ್ ಗಾನಗಳು ಕೇಳಲಷ್ಟೆ ಸಾಧ್ಯ ಎಂದರು.

ಮೂಲತಃ ಮೈಸೂರಿನವರಾದ ರಾಜನ್ ಮತ್ತು ನಾಗೇಂದ್ರ ಸಹೋದರರಿಬ್ಬರೂ 1952ರಲ್ಲಿ ಕನ್ನಡದ ಸೌಭಾಗ್ಯ ಲಕ್ಷ್ಮೀ ಚಿತ್ರಕ್ಕೆ ಸಂಗೀತ ಸಂಯೋಜನ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು.
1950, 1960, 1970, 1980 ಮತ್ತು 1990ರ ದಶಕದ ಮೆಲೋಡಿಕಿಂಗ್ ಎನಿಸಿಕೊಂಡಿದ್ದ ಪ್ರಸಿದ್ದ ಸಂಗೀತ ಸಂಯೋಜಕರಾಗಿ ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ರಮೇಶ್‍ಭರಧ್ವಾಜ್ ಮಾತನಾಡಿ. ರಾಜನ್ ಮತ್ತು ನಾಗೇಂದ್ರ ಇಬ್ಬರ ಹೆಸರನ್ನೂ ಸದಾ ಒಟ್ಟಿಗೆ ಸಂಭೋದಿಸಲಾಗುತ್ತಿತ್ತು. ಇವರು 1950, 1960, 1970, 1980 ಮತ್ತು 1990ರ ದಶಕದ ಮೆಲೋಡಿಕಿಂಗ್ ಎನಿಸಿಕೊಂಡಿದ್ದ ಪ್ರಸಿದ್ದ ಸಂಗೀತ ಸಂಯೋಜಕರಾಗಿದ್ದರು ಎಂದರು.

ರಮಾನಂದ್‍ಭಟ್ ಮಾತನಾಡಿ. ಗಾನ ಗಂದರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರಂಭದ ದಿನಗಳು…
ಈ ಜೋಡಿ ಕನ್ನಡದ 200 ಚಿತ್ರಗಳೂ ಸೇರಿದಂತೆ ಸುಮಾರು 375 ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರಾಜನ್ ಮತ್ತು ನಾಗೇಂದ್ರ ಅವರನ್ನು ಪ್ರೀತಿಯಿಂದ ಕನ್ನಡ ಚಿತ್ರರಂಗದ ಕಲ್ಯಾಣ್ ಜಿ – ಆನಂದ್ ಜಿ ಎಂದು ಕರೆಯಲಾಗುತ್ತಿತ್ತು. ರಾಜನ್ ಅವರ ಸಹೋದರ ನಾಗೇಂದ್ರ 2000ರಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಇದೀಗ ರಾಜನ್ ಅವರ ನಿಧನ ವಾರ್ತೆಯು ಕನ್ನಡ ಸಿನೆಮಾ ಸಂಗೀತದ ಅದ್ಭುತ ಯುಗಕ್ಕೆ ಅಂತ್ಯ ಎಂಬಂತೆ ಭಾಸವಾಗುತ್ತಿದೆ ಎಂದರು.

ಅಧ್ಯಕ್ಷ ಶರತ್ ಭಟ್ ಮಾತನಾಡಿ. ರಾಜನ್ ಮತ್ತು ನಾಗೇಂದ್ರ ಸಹೋದರರಿಬ್ಬರೂ 1952ರಲ್ಲಿ ಕನ್ನಡದ ಸೌಭಾಗ್ಯ ಲಕ್ಷ್ಮೀ ಚಿತ್ರಕ್ಕೆ ಸಂಗೀತ ಸಂಯೋಜನ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. ರಾಜನ್ ಮತ್ತು ನಾಗೇಂದ್ರ ಇಬ್ಬರ ಹೆಸರನ್ನೂ ಸದಾ ಒಟ್ಟಿಗೆ ಸಂಭೋದಿಸಲಾಗುತ್ತಿತ್ತು. ಇವರು 1950, 1960, 1970, 1980 ಮತ್ತು 1990ರ ದಶಕದ ಮೆಲೋಡಿಕಿಂಗ್ ಎನಿಸಿಕೊಂಡಿದ್ದ ಪ್ರಸಿದ್ದ ಸಂಗೀತ ಸಂಯೋಜಕರಾಗಿ ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆಎಂದು ತಿಳಿಸಿದರು.

ಕೃಷ್ಣಪ್ರಸ್ ಚಂದ್ರಶೇಖರ್ ಮಾತನಾಡುತ್ತಾ ರಾಜನ್-ನಾಗ್ರೆಂದ್ರ 1970, 1980ರ ದಶಕದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದರು. ಅವರ ಮಧುರ ಗೀತೆಗಳಿಗೆ ಹೆಸರುವಾಸಿಯಾದ ಅವರ ನೂರಾರು ಹಾಡುಗಳು ಇಂದಿಗೂ ನಿತ್ಯ ಹರಿದ್ವರ್ಣದ ಹಿಟ್‍ಗಳಾಗಿವೆ ಮತ್ತು ಇಂದಿಗೂ ಜನಪ್ರಿಯವಾಗಿವೆ. ಇವರಿಬ್ಬರು ಸಂಗೀತ ಸಂಯೋಜನೆ ಮಾಡಿರುವ ಹಾಡುಗಲು ಯುಗಳ ಗೀತೆಗಳಿಗೆ ಹೆಸರುವಾಸಿಯಾಗಿದ್ದು ಈ ಹಾಡುಗಳನ್ನು ಹೆಚ್ಚಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಹಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಅಂಚೆ ಅಧಿಕಾರಿ ಮಂಜುನಾಥ್ ಭಟ್ರು, ಅನಂತಕೃಷ್ಣ, ಅಪ್ಪು, ಪವಿತ್ರ ಶರತ್ ಭಟ್, ಕು.ಸ್ಕಂಧ ಉಪಸ್ಥಿತರಿದ್ದರು.