ಮೂಡಿಗೆರೆ :  ಕಾಫಿ ಉದ್ಯಮಕ್ಕೆ ಮತ್ತು ಬೆಳೆಗಾರರಿಗೆ  ಗೌರವ ತಂದುಕೊಟ್ಟವರು ಸಿದ್ಧಾರ್ಥಣ್ಣ : ಜನ್ನಾಪುರ ಸುಧೀರ್ 

1077
ಮೂಡಿಗೆರೆ :ಕಾಫಿ ಕಿಂಗ್  ವಿ.ಜಿ.ಸಿದ್ದಾರ್ಥ್ ಅವರಿಗೆ  ಜನ್ನಾಪುರ ವರ್ತಕರ ಸಮುದಾಯ ಭವನದಲ್ಲಿ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯುವ ಬ್ರಿಗೇಡ್ ಹಾಗೂ ಧರ್ಮಸ್ಥಳ ಸಂಘದ ಸದಸ್ಯರು ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸುಧೀರ್ ಮಾತನಾಡಿ  ನಾವು ಇಂದು ನಮ್ಮ ಕಾಫಿ ನಾಡಿನ ಮುತ್ತನ್ನು ಕಳೆದುಕೊಂಡಿದ್ದೇವೆ ಮಲೆನಾಡಿನ ಸಾಕಷ್ಟು ಯುವಕರಿಗೆ ದಾರಿದೀಪ ಆಗಿದ್ದರು.  ಕಾಫಿ ಬೆಳೆಗಾರರಿಗೆ ಹಾಗೂ ಕಾಫಿ ಉದ್ಯಮಕ್ಕೆ ಗೌರವ ಪ್ರತಿಷ್ಠೆ  ತಂದುಕೊಟ್ಟಿದ್ದು ಕಾಫಿ ಬೆಳೆಗಾರರು ಮನೆ ಮಗನನ್ನು ಕಳೆದುಕೊಂಡಂತಾಗಿದೆ ಎಂದರು .ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷರಾದ ಅನಿಲ್ ಮಾತನಾಡಿ ಸಾವಿರಾರು ಯುವಕರಿಗೆ ಜೀವನವನ್ನು ಕಲಿಸಿಕೊಟ್ಟ ದೊರೆ ಅವರು ಸಿದ್ದಾರ್ಥ್ ಕಾಫಿ ನಾಡಿಗೆ ಒಂದು ಶಕ್ತಿ ನಾವೆಲ್ಲ ಸ್ವಂತ ಅಣ್ಣನನ್ನು ಕಳೆದುಕೊಂಡಿದ್ದೇವೆ ಎಂದರು.