ಮೂಡಿಗೆರೆ : ಗವಿಕಲ್ ಕಪ್ ವಾಲಿಬಾಲ್ 3ನೇ ವರ್ಷದ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯ ಜನ್ನಾಪುರ ಸಮೀಪದ ಗವಿಕಲ್ ಕ್ಲಬ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಿತು. ಮೂಡಿಗೆರೆ ಶಾಸಕರಾದ ಎಂ.ಪಿ. ಕುಮಾರಸ್ವಾಮಿ ಉದ್ಘಾಟನೆ ಮಾಡಿ ಮಾತನಾಡಿದ ಇವರು, ಗ್ರಾಮೀಣ ಭಾಗದಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಆಯೋಜನೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅವರು ಮಾತನಾಡಿ ಜನ್ನಾಪುರ ಒಂದು ಚಿಕ್ಕ ಗ್ರಾಮವಾಗಿದ್ದರೂ ಸಾವಿರಾರು ಜನ ಕ್ರೀಡಾಭಿಮಾನಿಗಳನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ, ಇಷ್ಟು ದೊಡ್ಡ ಮಟ್ಟದಲ್ಲಿ ಕ್ರೀಡೆ ಆಯೋಜನೆ ಮಾಡಿರುವ ಗವಿಕಲ್ ಕ್ಲಬ್‍ನ ಮುಖ್ಯಸ್ಥ ಹಂತೂರು ಸತೀಶ್ ಹಾಗೂ ಅವರ ತಂಡದ ಕ್ರೀಡಾ ಅಭಿಮಾನವನ್ನು ಮೆಚ್ಚಬೇಕು. ನನಗೆ ಯಾವುದೋ ದೊಡ್ಡ ಕ್ರೀಡಾಂಗಣದಲ್ಲಿ ಕೂತ ಅನುಭವ ಆಗಿದೆ. ಹಾಗೂ ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಒತ್ತು ಕೊಡಬೇಕು. ಇಲ್ಲದಿದ್ದಲ್ಲಿ ಮುಂದೊಂದು ದಿನ ನಮ್ಮ ಈ ಮೊಬೈಲ್ ಯುಗದಲ್ಲಿ ನಮ್ಮ ಎಲ್ಲಾ ಯುವ ಪೀಳಿಗೆ ಗ್ರಾಮೀಣ ಕ್ರೀಡೆಯನ್ನು ಮರೆಯುತ್ತಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜನ್ನಾಪುರ ರಘು, ಗವಿಕಲ್ ಕ್ಲಬ್ ಕಾರ್ಯದರ್ಶಿಯಾದ ಗಂಗಾಧರ್, ಸದಸ್ಯರಾದ ಸುಧೀರ್ ಜನ್ನಾಪುರ, ತರುವೆ ಆದರ್ಶ್, ಮಗ್ಗಲಮಕ್ಕಿ ಕೀರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ನಾಗೇಶ್, ಕಲ್ಲೇಶ್ವರ ಪ್ರಿಂಟ್ಸ್ ಮಾಲೀಕರಾದ ಪೂರ್ಣೇಶ್ ಇಂದಾವರ ಸೇರಿದಂತೆ ಇತರ ಸದಸ್ಯರು ಹಾಗೂ ನೂರಾರು ಕ್ರೀಡಾಭಿಮಾನಿಗಳು ಭಾಗಿಯಾದರು.










