ಮೂಡಿಗೆರೆ: ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆಯಂತಹ ಕಾರ್ಯಕ್ರಮ ಇಂದಿನ ಮಕ್ಕಳ ವಿದ್ಯಾಬ್ಯಾಸವನ್ನು ತುಂಬಾ ಉನ್ನತ ಮಟ್ಟಕ್ಕೆ ಕೊಂಡಯ್ಯಲು ಹಾಗು ಅವರ ಕಲಿಕಾ ಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಜೆ.ಡಿ.ಎಸ್.ಜಿಲ್ಲಾಧ್ಯಕ್ಷರದ ರಂಜನ್ ಅಜಿತ್ ಕುಮಾರ್ ಅಭಿಪ್ರಾಯ ಪಟ್ಟರು.
ಅವರು ಇಂದು ದಾರದಹಳ್ಳಿಯ ಸರ್ಕಾರಿ ಪ್ರೌಡಾಶಾಲೆಯಲ್ಲಿ ಬೈಸಿಕಲ್ ವಿತರಣೆ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿ ನಾನು ಸರ್ಕಾರಿ ಶಾಲೆಯಲ್ಲಿಯೇ ಕಲಿತಿದ್ದು ಅದರಲ್ಲಿಯೂ ನನ್ನ ಕಲಿಕಾ ದಿನಗಳಲ್ಲಿ ಸರಿಯಾದ ಎಲ್ಲಾ ವಿಶಯಕ್ಕೆ ಅನುಸಾರ ಶಿಕ್ಷಕರು ಇರಲಿಲ್ಲ ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಉತ್ತಮ ಶಿಕ್ಷಕರಿದ್ದಾರೆ.ನಾನು ಗಾಳಿ ಮಳೆಯೆನ್ನದೆ ಗದ್ದೆಯಲ್ಲಿಯೇ ನಡೆದು ಕೊಂಡು ಬಂದು ಹಾಗೆಯೇ ದಿನಕಳೆದಂತೆ ನಾನು ಸಹ ನನ್ನ ಸ್ವಂತ ಬೈಸಿಕಲ್ ತುಳಿದ ಆ ಶಾಲಾ ದಿನಗಳು ನನಗೆ ಖುಶಿಯನ್ನು ಕೊಡುತ್ತದೆ. ಮತ್ತು ಇಂದು ಎಲ್ಲಾ ಮಕ್ಕಳು ಸಮನಾಗಿ ಇರಬೇಕು ಯಾರು ಕೂಡ ಕಷ್ಟದ ಪರಿಸ್ಥಿತಿಯಲ್ಲಿ ಶಾಲೆಗೆ ನಡೆದು ಕೊಂಡು ಬರಬಾರದು ಎಂಬಂತಹ ಸರ್ಕಾರದ ಮಹತ್ವದ ತೀರ್ಮಾನದಿಂದ ಎಲ್ಲಾ ಸರ್ಕಾರಿ ಶಾಲೆಯ ಎಂಟನೆ ತರಗತಿ ಶಾಲಾ ಮಕ್ಕಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡುತ್ತಿದ್ದು ಇಂತಹ ಸರ್ಕಾರದ ಕ್ರಮಕ್ಕೆ ಶ್ಲಾಘಿಸುತ್ತೇನ ಎಂದರು.
ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಯ ಎಂಟನೇ ತರಗತಿ ಮಕ್ಕಳಿಗೆ ಬೇಕಾದಷ್ಟು ಹಣವನ್ನುಖರ್ಚುಮಾಡಿ ಉತ್ತಮ ಗುಣಮಟ್ಟದಿಂದ ಕೂಡಿದ ಸೈಕಲ್ ವಿತರಣೆ ಮಾಡಿದ್ದು ಇದರ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು ಹಾಗು ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಬೇಕು ಎಂದು ಮಕ್ಕಳಲ್ಲಿ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಮಂಜುನಾಥ್, ದಾರದಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಸತ್ಯಾಅಣಿ, ಉಪಾಧ್ಯಕ್ಷರಾದ ಸಿದ್ದೇಶ್, ರೈತಮುಂಖಂಡರಾದ ಪುಟ್ಟಸ್ವಾಮಿಗೌಡ, ಸದಸ್ಯರಾದ ಮುಕುಂದ, ಹಾಗು ಶಾಲಾ ಮುಖ್ಯಶಿಕ್ಷಕರಾದ ಅಶ್ವಿನಿ, ಗ್ರಾಮ.ಪಂ.ಅಭಿವೃದ್ದಿ ಅಧಿಕಾರಿಯಾದಂತಹ ಸುಶ್ಮಿತಾ ಮುಂತಾದವರಿದ್ದರು.










