ಮೂಡಿಗೆರೆ : ಬಿಜೆಪಿ ವಿರುದ್ಧ ಜನ ತಿರುಗಿ ಬಿದ್ದಿರುವುದು ಗ್ರಾ.ಪಂ ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ : ನಯನ ಮೋಟಮ್ಮ.

118
firstsuddi

ಮೂಡಿಗೆರೆ : ಜನರ ದಾರಿ ತಪ್ಪಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಗಿಟ್ಟಿಸಿಕೊಂಡಿರುವ ಬಿಜೆಪಿ ಅಭಿವೃದ್ಧಿ ಕೆಲಸ ಮಾಡದೇ ನಿರಂತರವಾಗಿ ಜನರ ಸುಲಿಗೆಯಲ್ಲಿ ತೊಡಗಿದ್ದರಿಂದ ಗ್ರಾ.ಪಂ ಚುನಾವಣೆಯಲ್ಲಿ ರಾಜ್ಯದಲ್ಲೇ ಹೀನಾಯ ಸೋಲು ಕಾಣುವಂತಾಗಿದೆ. ಈ ಫಲಿತಾಂಶದಿಂದ ಬಿಜೆಪಿ ಸರಕಾರದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ಎಂಬುವುದು ಸ್ಪಷ್ಟವಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ಇದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿ ಹೊರ ಹೊಮ್ಮುವ ದಿಕ್ಸೂಚಿಯಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ವಿಭಾಗದ ಸದಸ್ಯೆ ನಯನ ಮೋಟಮ್ಮ ಅವರು ತಿಳಿಸಿದರು. ಅವರು ಪಟ್ಟಣದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂಯೆ ಅಗತ್ಯ ವಸ್ತುಗಳ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಅತಿವೃಷ್ಠಿಯಿಂದ ಜನ ಬೀದಿಯಲ್ಲಿದ್ದಾರೆ. ಸರ್ಕಾರದ ಆರ್ಥಿಕ ನೀತಿಯಿಂದ ಯುವಕರು ನಿರುದ್ಯೋಗಿಗಳಾಗಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ಕಾಯಿದೆಯಿಂದ ರೈತರು ದೇಶಾಧ್ಯಂತ ಪ್ರತಿಭಟನೆಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಜಿ.ಎಸ್.ಟಿ, ನೂತನ ಬ್ಯಾಂಕಿಂಗ್ ನೀತಿಯ ಮೂಲಕ ಸರ್ಕಾರ ಜನರನ್ನು ಪ್ರತಿನಿತ್ಯ ಸುಲಿಗೆ ಮಾಡಿ ಬೀದಿಯಲ್ಲಿ ತಂದು ನಿಲ್ಲಿಸಿದೆ ಎಂದು ಆರೋಪಿಸಿದರು.
ಈಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, ಅಕಾಲಿಕ ಮಳೆಯಿಂದ ರೈತರ ಕಾಫಿ, ಕಾಳಿ ಮೆಣಸು, ಭತ್ತದ ಬೆಳೆ ಸಂಪೂರ್ಣ ಕೊಚ್ಚಿ ಹೋಗಿದೆ. 2 ವರ್ಷದ ಅತೀವೃಷ್ಠಿಯಿಂದ ಕಮಗೆಟ್ಟಿದ್ದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಆಗಲೇ ಮತ್ತೊಂದು ಮಹಾ ದುರಂತ ರೈತರ ಬೆಳೆಯನ್ನು ನಾಶ ಮಾಡಿದೆ. ರೈತರು, ಕೂಲಿ ಕಾರ್ಮಿಕರು ಸಾಮೂಹಿಕವಾಗಿ ನಿರಾಶ್ರಿತರಾಗಿದ್ದಾರೆ. ಸರ್ಕಾರ ಹಿರಿಯ ಅಧಿಕಾರಿಗಳನ್ನು ಜಿಲ್ಲೆಗೆ ಕಳುಹಿಸಿ ಸಮೀಕ್ಷೆ ನಡೆಸಬೇಕು ಎಂದರು. ಈ ಸದರ್ಭದಲ್ಲಿ ಕಾಮಗ್ರೆಸ್ ಮುಖಂಡ ಶಿವ ಸಾಗರ್ ಸೇರಿದಂತೆ ಇತರರು ಇದ್ದರು.