ಕೊಟ್ಟಿಗೆಹಾರ:ಉಪವಲಯ ಅರಣ್ಯಾಧಿಕಾರಿಯೊಬ್ಬರು ಮಹಿಳೆಯೊಂದಿಗೆ ಅರಣ್ಯ ಇಲಾಖೆಯ ವಸತಿಗೃಹದಲ್ಲಿದ್ದ ಹಿನ್ನಲೆಯಲ್ಲಿ ಗಬ್ಗಲ್ ಸುತ್ತಮುತ್ತಲ್ಲಾ ಗ್ರಾಮಸ್ಥರು ಗಬ್ಗಲ್ ಅರಣ್ಯ ಇಲಾಖೆ ವಸತಿಗೃಹಕ್ಕೆ ಮುತ್ತಿಗೆ ಹಾಕಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಗಬ್ಗಲ್‍ನ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಕೊಪ್ಪ ವಿಭಾಗದ ಉಪವಲಯ ಅರಣ್ಯಾಧಿಕಾರಿ ಚಂದನ್ ಭಾನುವಾರ ರಾತ್ರಿ ಮಹಿಳೆಯೊಂದಿಗೆ ಸಿಕ್ಕಿ ಬಿದ್ದಿದ್ದು ಆ ಮಹಿಳೆಯ ಪತಿ ಹಾಗೂ ಗಬ್ಗಲ್ ಸುತ್ತಮುತ್ತಲ್ಲಾ ಗ್ರಾಮಸ್ಥರು ಉಪವಲಯ ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಉಪವಲಯ ಅರಣ್ಯಾಧಿಕಾರಿ ಚಂದನ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗಬ್ಗಲ್ ಸುತ್ತಮುತ್ತಲ್ಲಾ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪಿಎಸ್‍ಐ ಮೂರ್ತಿ, ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ, ವೃತ್ತ ನಿರೀಕ್ಷಕ ಜಗನ್ನಾಥ್ ಸ್ಥಳಕ್ಕೆ ಬೇಟಿ ನೀಡಿದ್ದು ಮಹಿಳೆ ಹಾಗೂ ಉಪವಲಯ ಅರಣ್ಯಾಧಿಕಾರಿ ಚಂದನ್ ಅವರನ್ನು ಠಾಣೆಗೆ ಕರೆದ್ಯೊಯ್ದಿದ್ದು ಪೋಲಿಸರು ತನಿಖೆ ಕೊಂಡಿದ್ದಾರೆ.










