ಮೂಡಿಗೆರೆ : ಮಾರುತಿ ಕಾರು ಮರಕ್ಕೆ ಡಿಕ್ಕಿ-ಇಬ್ಬರ ದುರ್ಮರಣ…

5018
firstsuddi

ಮೂಡಿಗೆರೆ : ಹ್ಯಾಂಡ್‍ಪೋಸ್ಟ್ ಸಮೀಪದ ರಾಕ್ ಗಾರ್ಡನ್ ಹೋಟೆಲ್ ಬಳಿ ಮಾರುತಿ-800 ಕಾರು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದ್ದು, ಆದರ್ಶ್(16), ಧ್ಯಾನ್(16) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಗಾಯಗೊಂಡ ಇನ್ನೋರ್ವ ಹರ್ಷಿತ್ ಎಂಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದ್ದು, ಇವರು ಮುತ್ತಿಗೆಪುರ ಹರೀಶ್ ಪಿ.ಯು ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಿದ್ದರು ಎನ್ನಲಾಗಿದ್ದು, ಅಪಘಾತ ಸಂಭವಿಸಿದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಘಟನಾ ಸ್ಥಳಕ್ಕೆ ಮೂಡಿಗೆರೆ ಠಾಣಾಧಿಕಾರಿ ರವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.