ಮೂಡಿಗೆರೆ : ವಿದೇಶಕ್ಕೆ ಹೋಗಿ ಬಂದ ಯಾರಿಗೂ ನಮ್ಮ ಆಟೋದಲ್ಲಿ ಪ್ರವೇಶವಿಲ್ಲ, ಆಟೋಗಳ ಮೇಲೆ ಕೊರೊನಾ ಭೀತಿ ಬರಹ ನೋಡಿ ಜನರು ಶಾಕ್…!

893
firstsuddi

ಮೂಡಿಗೆರೆ : ವಿದೇಶದಿಂದ ಬಂದ ಸ್ಥಳಿಯರಾಗಬಹದು ಅಥವಾ ಪ್ರವಾಸಿಗರಾಗಬಹುದು, ಯಾರೂ ನಮ್ಮ ಆಟೋ ಬಳಿ ಬರಬೇಡಿ, ನಾವು ಬಾಡಿಗೆ ಬರುವುದಿಲ್ಲ, ನಮ್ಮನ್ನು ಮಾತನಾಡಿಸಲೂ ಬೇಡಿ, ನಮ್ಮ ಆಟೋಗಳ ಸೇವೆ ಸ್ಥಳಿಯರಿಗೆ ಮಾತ್ರ ಎಂದು ಮಲೆನಾಡಿನ ಆಟೋ ಡ್ರೈವರ್ ಗಳು ತಮ್ಮ ಆಟೋಗಳ ಮೇಲೆ ಫಲಕ ಹಾಕಿಕೊಂಡಿದ್ದಾರೆ. ಕೊರೋನ ಜಾಗೃತಿ ಅಭಿಯಾನದ ಜೊತೆ, ತಾವೂ ಕೂಡ ವೈರಸ್ ಗೆ ಒಳಗಾಗುವುದರಿಂದ ತಪ್ಪಲು ಆಟೋಗಳ ಮೇಲೆ ಈ ರೀತಿ ಪ್ಲಾಸ್ಟರ್ ಹಾಕಿಕೊಂಡಿದ್ದಾರೆ. ತಾಲೂಕಿನ ಮತ್ತಿಕಟ್ಟೆ ಆಟೋ ಡ್ರೈವರ್ ಗಳು ತಮ್ಮ ಆಟೋ ಮೇಲೆ ಈ ರೀತಿಯ ಪ್ಲಾಸ್ಟರ್ ಹಾಕಿಕೊಂಡಿದ್ದಾರೆ. ವಿದೇಶದಿಂದ ಬಂದವರಿಗೆ ಇದು ಜಾಗೃತಿ ಹಾಗೂ ಯಾರಿಗೆ ಕೊರೋನ ಇರುತ್ತದೆ, ಯಾರಿಗೆ ಇರುವುದಿಲ್ಲ ಎಂದು ಗೊತ್ತಾಗುವುದಿಲ್ಲ. ಹಾಗಾಗಿ, ಬಂದವರು ಇದನ್ನು ನೋಡಿ ಅರ್ಥೈಸಿಕೊಳ್ಳುತ್ತಾರೆ ಎಂದು ಈ ರೀತಿ ಹಾಕಿಕೊಂಡಿದ್ದೇವೆ ಅಂತಾರೆ ಆಟೋ ಡ್ರೈವರ್ ಗಳು. ಆದರೆ ಮಲೆನಾಡಲ್ಲಿ ಈವರೆಗೆ ಒಂದೂ ಕರೋನಾ ಕೇಸ್ ದಾಖಲಾಗಿಲ್ಲ. ಆದರೆ ಇದನ್ನೆಲ್ಲಾ ನೋಡಿದರೆ ಮಲೆನಾಡಿಗರು ಕೊರೋನಾಗೆ ಎಷ್ಟು ಭಯಭೀತರಾಗಿದ್ದಾರೆಂಬುದು ಅರಿವಾಗಲಿದೆ.