ಕೊಟ್ಟಿಗೆಹಾರ : ಶುಚಿತ್ವ ಕಾಪಾಡಿಕೊಳ್ಳುವುದು ಮತ್ತು ರುಚಿಯಾದ ತಿನಿಸುಗಳನ್ನು ನೀಡುವುದೇ ಹೋಟೆಲ್ ಉದ್ಯಮದ ಮಾನದಂಡವಾಗಿದ್ದು ಶುಚಿ ಮತ್ತು ರುಚಿಗೆ ಮೊದಲ ಆದ್ಯತೆ ಕೊಡಬೇಕಿದೆ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು. ಕೊಟ್ಟಿಗೆಹಾರದಲ್ಲಿ ನೂತನವಾಗಿ ಆರಂಭವಾದ ಪ್ರವಾಸೋದ್ಯಮ ಇಲಾಖೆಯ ನಿಸರ್ಗ ಗ್ರ್ಯಾಂಡ್ ಹೋಟೆಲ್ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಅನುದಾನದಲ್ಲಿ ಈ ಹೋಟೆಲ್ ನಿರ್ಮಾಣವಾಗಿದ್ದು ಮುಂದಿನ ದಿನಗಳಲ್ಲಿ ವಸತಿಗೃಹಗಳು ನಿರ್ಮಾಣವಾಗಲಿದೆ. ವಿಲ್ಲುಪುರಂ ಮಂಗಳೂರು ಹೆದ್ದಾರಿ ಬದಿಯಲ್ಲಿ ಹೋಟೆಲ್ ಇರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಈ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಅಬಿವೃದ್ದಿ ಹೊಂದಲಿ ಎಂದರು.
ಚಾರ್ಮಾಡಿ ಘಾಟ್ ಮಾರ್ಗವಾಗಿ ಬಸ್ ಸೇರಿದಂತೆ ಘನವಾಹನಗಳ ಸಂಚಾರ ಇಲ್ಲದಿರುವುದರಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿದ್ದು ವ್ಯಾಪಾರ ವಹಿವಾಟುಗಳು ಕುಸಿದಿವೆ. ಚಾರ್ಮಾಡಿ ಘಾಟ್ ಹೆದ್ದಾರಿ ಅಭಿವೃದ್ದಿ ಸಧ್ಯದಲ್ಲೆ ಪ್ರಾರಂಭವಾಗಲಿದೆ. ಈ ವರ್ಷದೊಳಗೆ ತಾಲ್ಲೂಕಿನ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಅವರು ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಚಾರ್ಮಾಡಿ ಘಾಟ್‍ನ ಸಮೀಪದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೆ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಇರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.
ಮಾಜಿ ಸಚಿವ ಬಿ.ಬಿ ನಿಂಗಯ್ಯ ಮಾತನಾಡಿ ಪಾರಂ ನಂ 57 ರ ಅರ್ಜಿ ಸಲ್ಲಿಸಲು ರೈತರಿಗೆ ಮತ್ತಷ್ಟು ಕಾಲಾವಕಾಶ ನೀಡಬೇಕಿದೆ. ಕೆಲವರು ಅರ್ಜಿ ಸಲ್ಲಿಸದೇ ಇರುವುದರಿಂದ ಮತ್ತಷ್ಟು ಕಾಲಾವಕಾಶ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಜಿ.ಪಂ ಸದಸ್ಯ ಶಾಮಣ್ಣ ಮಾತನಾಡಿದರು. ಪ್ರವಾಸೋಧ್ಯಮ ಇಲಾಖೆಯ ಉಪ ನಿರ್ದೇಶಕ ರಾಜು, ತಾ.ಪಂ ಸದಸ್ಯೆ ವೀಣಾ ಉಮೇಶ್, ತರುವೆ ಗ್ರಾ.ಪಂ ಅಧ್ಯಕ್ಷೆ ರವಿಕಲಾ ಪೈ. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ, ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಜಾಕೀರ್ ಹುಸೇನ್, ಬಣಕಲ್ ಜೇಸಿಐ ಅಧ್ಯಕ್ಷ ರವಿ ವಾಟೆಖಾನ್, ಬೆಳೆಗಾರರ ಸಂಘದ ಜಯರಾಮ್ ಬಿದರಹಳ್ಳಿ, ಜೆಡಿಎಸ್ ಮುಖಂಡ ಲಕ್ಷ್ಮಣಗೌಡ, ಸಮಾಜಸೇವಕ ಹಸನಬ್ಬ, ಬಣಕಲ್ ವಿಎಸ್‍ಎಸ್‍ಎನ್ ಅಧ್ಯಕ್ಷ ಬಿ.ಎಂ ಭರತ್, ಬಿಎಸ್‍ಪಿ ಮುಖಂಡ ಮರಗುಂದ ಪ್ರಸನ್ನ, ಕಾಫಿ ಬೆಳೆಗಾರರಾದ ಶೇಖರ್ ಶೆಟ್ಟಿ, ನಿಡುವಾಳೆ ಗ್ರಾ.ಪಂ ಮಾಜಿ ಅಧ್ಯಕ್ಷ ರೀಟಾ ಪಿಂಟೋ, ಗುತ್ತಿಗೆದಾರ ಮರ್ಕಲ್ ಸತೀಶ್, ಗ್ರಾಮಸ್ಥರಾದ ಗಜೇಂದ್ರಗೌಡ, ಸಂಜಯಗೌಡ, ಆದರ್ಶ ತರುವೆ, ಪೃಥ್ವಿ, ರಮೇಶ್ ಗುಡ್ಡಟ್ಟಿ, ಭಾರತಿ, ಲಲಿತಾ, ಉದಯ್ ಬಣಕಲ್ ಮುಂತಾಧವರು ಇದ್ದರು.










