ಮೂಡಿಗೆರೆ : ಸಂಸದರ ಆದರ್ಶ ಗ್ರಾಮ ದಾರದಹಳ್ಳಿಯ ಸರ್ಕಾರಿ ಫ್ರೌಢಶಾಲೆ ಬಿರುಕು ಬಿಟ್ಟಿದ್ದು, ಜೀವ ಭಯದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಆದರೆ ಅದರ ದುರಸ್ಥಿಯತ್ತ ಮಾತ್ರ ಜನ ಪ್ರತಿನಿಧಿಗಳು ಗಮನಹರಿಸದಿರುವುದು ದುರಾದೃಷ್ಟಕರ ಸಂಗತಿಯಾಸದೆ ಶೋಭಾ ಕರಾಂದ್ಲಾಜೆ ಅವರೆ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ ಎಂದು ಗ್ರಾಮಸ್ಥರು ಸಂಸದರಿಗೆ ಶಾಪ ಹಾಕುತ್ತಿದ್ದಾರೆ.

ಇತ್ತೀಚೆಗೆ ಸರ್ಕಾರಿ ಶಾಲೆಗಳು ಮುಚ್ಚಲು ಜನಪ್ರತಿನಿಧಿಗಳೆ ಮುಖ್ಯ ಕಾರಣಕರ್ತರೆಂದರೆ ತಪ್ಪಾಗಲಾರದು, ಕಾರಣ ದಾರದಹಳ್ಳಿ ಸಂಸದರ ಗ್ರಾಮದಲ್ಲಿರುವ ಸರ್ಕಾರಿ ಫ್ರೌಢಶಾಲೆಯೇ ಒಂದು ಉದಾಹರಣೆಯಾಗಿದೆ.
1979 ರ ನವೆಂಬರ್ 1 ರಂದು ಉದ್ಘಾಟನೆಗೊಂಡ ಸರ್ಕಾರಿ ಫ್ರೌಢಶಾಲೆ ಶಿಕ್ಷಣ ಸಚಿವ ಬಿ.ಸುಬ್ಬಯ್ಯ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎಂ.ಮಲ್ಲಪ್ಪ ಸಚಿವ ಡಿ.ಬಿ.ಚಂದ್ರೇಗೌಡ, ಶಾಸಕಿ ಮೋಟಮ್ಮ ಅವರು ಉದ್ಘಾಟಿಸಿ ಸಾವಿರಾರು ಮಕ್ಕಳ ಓದಿಗೆ ಅನುಕೂಲ ಮಾಡಿಕೊಟ್ಟರು. ಆದರೆ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಕುರ್ಚಿಗಾಗಿ ಕಿತ್ತಾಡಿದರೆ ಹೊರತು ಶಿಕ್ಷಣ ದೇಗುಲವನ್ನು ಮರೆತಿದ್ದರ ಪರಿಣಾಮ ವಿದ್ಯಾರ್ಥಿಗಳು ಜೀವ ಭಯದಲ್ಲಿ ಪಾಠ ಕೇಳುವಂತ ಪರಿಸ್ಥಿತಿ ಎದುರಾಗಿದೆ. ಶಾಲೆಗೋಡೆಗಳು ಬಿರುಕು ಬಿಟ್ಟಿದ್ದು ಈಗಲೋ ಆಗಲೋ ಬೀಳುವಂತಾಗಿದೆ.

ದಾರದಹಳ್ಳಿ ಎಂದರೆ ದೆಹಲಿಯಲ್ಲೂ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದೆ ಮತ್ತು ಸಂಸದರ ಆದರ್ಶ ಗ್ರಾಮವೆಂದೆ ಘೊಷಿಸಿತು. ಆದರೆ ಅಭಿವೃದ್ದಿಯಲ್ಲಿ ಮಾತ್ರ ಶೂನ್ಯ ಸಾಧನೆ ಮಾಡಿದೆ. ಆದರ್ಶ ಗ್ರಾಮದ ಸಂಸದೆ ಕಾಣೆಯಾಗಿರುವುದು ಬಹಳಷ್ಟು ಜನರಲ್ಲಿ ನೋವನ್ನುಂಟುಮಾಡಿದೆ. ಇನ್ನಾದರೂ ಈ ಆದರ್ಶ ಗ್ರಾಮದ ಸರ್ಕಾರಿ ಶಾಲೆಯತ್ತ ಜನ ಪ್ರತಿನಿಧಿಗಳು ಗಮನಹರಿಸುವುದರ ಮೂಲಕ ಮಕ್ಕಳ ಜೀವಕ್ಕೆ ರಕ್ಷಣೆ ಕೊಡುವವರೇ ಕಾದು ನೋಡಬೇಕಾಗಿದೆ.










