ಮೂಡಿಗೆರೆ: ಸಿಎಂ ಭೇಟಿ ಕಾಟಾಚಾರದ ಭೇಟಿ ಸಂತ್ರಸ್ಥರ ಆಕ್ರೋಶ…

1026

ಮೂಡಿಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮೂಡಿಗೆರೆಗೆ ಭೇಟಿ ನೀಡಿ ತಾನು ಇದ್ದೇನೆ ಎಂದು ತೋರಿಸುವಂತಿತ್ತು. ತುರಾತುರಿಯಲ್ಲಿ ಆಗಮಿಸಿದ ಸಿಎಂ ಕೇವಲ ಹತ್ತೇ ನಿಮಿಷದಲ್ಲಿ ಭೇಟಿ ಮುಗಿಸಿ ಹಿಂತೆರಳಿದರು. ಮಲೆಮನೆ ಗ್ರಾಮಸ್ಥರು ಮುಖ್ಯಮಂತ್ರಿಗಳು ಬರುತ್ತಾರೆ ತಮ್ಮ ಅಳಲನ್ನು ಆಲಿಸುವುದರೊಂದಿಗೆ ಸಾಂತ್ವಾನ ಹೇಳಿ ಪರಿಹಾರ ಸೂಚಿಸುತ್ತಾರೆ ಎಂದು ಬಿಡದೆ ಸುರಿಯುತ್ತಿರುವ ಮಳೆಯಲ್ಲು ಕಾದರೂ ಆದರೆ ಆಗಮಿಸಿದ ಸಿಎಂಗೆ ಸಂತ್ರಸ್ಥರು ನೋವು ಆಲಿಸುವಷ್ಟು ಸಮಯವಿರಲಿಲ್ಲ. ತಡವಾಯಿತು ಎಂದು ಅಲ್ಲಿಂದ ನಿರ್ಗಮಿಸಿದರು. ಬೆಳಿಗ್ಗೆಯಿಂದ ಸಿಎಂಗಾಗಿ ಕಾದಿದ್ದ ಜನರು ತಮ್ಮ ಗೋಳನ್ನು ಆಲಿಸುವವರು ಯಾರು ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದರು.