ಮೂಡಿಗೆರೆ :ಸಿದ್ಧಾಂತ ಧರ್ಮಕ್ಕೆ, ದೇವರಿಗಲ್ಲ… ಗಣಪತಿ ಕೂರಿಸಲು ಜಾಗ ನೀಡಿ ಸೌಹಾರ್ದತೆ ಮೆರೆದ ಜೀಯಾಸಾಬ್…

65

ಮೂಡಿಗೆರೆ : ಸಿದ್ಧಾಂತ ಧರ್ಮಕ್ಕಷ್ಟೆ. ದೇವರಿಗಲ್ಲ ಎಂದು ಗಣಪತಿ ಕೂರಿಸಲು  ಹ್ಯಾಂಡ್ ಪೋಸ್ಟ್ ಸಮೀಪದ ಜಿಯಾವುಲ್ಲಾ (ಜಿಯಾಸಾಬ್ರು) ಗಣಪತಿ ಕೂರಿಸಲು ತಮ್ಮ ಜಾಗವನ್ನ ನೀಡಿ ಸೌಹಾರ್ದತೆ ಮೆರೆದಿದ್ದಾರೆ. ತಾಲೂಕಿನ ಕೆಸವಳಲು ಗ್ರಾಮದ ಸುಂದ್ರೇಶ್, ಬೆಟಗೆರೆ ಪ್ರಶಾಂತ್ಎಂ ಬುವರು ಬಾಲಗಣಪತಿ ಸೇವಾ ಸಮಿತಿಯ ಸಂಘಟನೆ ಮಾಡಿಕೊಂಡು ಹ್ಯಾಂಡ್ ಪೋಸ್ಟ್‍ನಲ್ಲಿ ಗಣಪತಿ ಕೂರಿಸಲು ಮುಂದಾಗಿದ್ದಾರೆ. ಈ ಗಣಪತಿ ಕೂರಿಸಲು ಜಾಗ ನೀಡಿದ್ದು ಮುಸ್ಲಿಂ ವ್ಯಕ್ತಿ. ಹ್ಯಾಂಡ್ ಪೋಸ್ಟ್ಉದ್ಯಮಿ ಹಾಗೂ ಕೃಷಿಕರಾದ ಜಿಯಾಸಾಬ್ರು ತಮ್ಮ ಜಾಗದಲ್ಲಿ ಗಣಪತಿ ಕೂರಿಸಲು ಜಾಗ ನೀಡಿ ಧರ್ಮ ಮೀರಿದ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಗಣಪತಿ ಹಬ್ಬ ಅಂದ್ರೆ ಸಂಪೂರ್ಣ ಹಿಂದೂಗಳ ಹಬ್ಬ. ಅಲ್ಲಲ್ಲೇ ಧಾರ್ಮಿಕ ಸೌಹಾರ್ದತೆಗಾಗಿ ಕೆಲ ಮುಸ್ಲಿಮರು ಕೂಡ ಗಣಪತಿ ಕೂರಿಸಲು ಸಹಕಾರ ನೀಡುತ್ತಿದ್ದಾರೆ. ಆದರೆ, ಹಿಂದೂ-ಮುಸ್ಲಿಂ ಎಂದರೆ ಇಂದಿಗೂ ಸಮಾಜದಲ್ಲಿ ಬೇರೆಯದ್ದೇ ವಾತಾವರಣ ಹಾಗೂ ವಾದವಿದೆ. ಹಿಂದೂ ಮುಸ್ಲಿಮರಿಗೆ ಆಗುವುದಿಲ್ಲ. ಅವರದ್ದು ಧರ್ಮಕ್ಕಾಗಿ ಯಾವಾಗಲು ಜಗಳ ಎಂಬ ಮಾತುಗಳಿವೆ. ಆದರೆ, ಯಾವುದೇ ಧರ್ಮ ತಮ್ಮದೇ ಶ್ರೇಷ್ಠ ಧರ್ಮ ಎಂದು ಹೇಳಿಲ್ಲ. ಶಾಂತಿಯುತ ಸಮಾಜದ ಸ್ವಾಸ್ಥ್ಯವೇ ಎಲ್ಲಾ ಧರ್ಮಗಳ ಮೂಲ ಉದ್ದೇಶ. ಆದರೆ, ಕೆಲ ವ್ಯಕ್ತಿಗಳ ಕೆಲ ಕೃತ್ಯಗಳು ಸಮಾಜದಲ್ಲಿ ಒಡಕನ್ನ ಮೂಡಿಸುತ್ತಿರೋದಕ್ಕೆ ನೂರಾರು ಸಾಕ್ಷಿಗಳಿವೆ. ಆದರೆ, ಧರ್ಮ ಮೀರಿದ ಭಕ್ತಿ ಹಾಗೂ ದೇವರ ಮೇಲಿನ ಗೌರವ-ಪ್ರೀತಿಯಿಂದ ಕೆಲ ಅನ್ಯ ಕೋಮಿನ ವ್ಯಕ್ತಿಗಳು ಕೂಡ ತಮ್ಮ ಧರ್ಮದ ಜೊತೆ ಇತರೇ ಧರ್ಮ ಹಾಗೂ ದೇವರನ್ನೂ ಪ್ರೀತಿಸಿ-ಪೂಜಿಸಿ-ಗೌರವಿಸುತ್ತಿದ್ದಾರೆ. ಅದಕ್ಕೆ ಜಿಯಾಸಾಬ್ರು ಕೂಡ ಹೊರತಾಗಿಲ್ಲ. ತಮ್ಮ ಧರ್ಮದ ಜೊತೆ ಇತರೇ ಧರ್ಮದ ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿ ಧಾರ್ಮಿಕ ಭಾವೈಕ್ಯತೆ ಸಾರುತ್ತಿದ್ದಾರೆ. ನನ್ನ ಧರ್ಮವೇ ಶ್ರೇಷ್ಠ ಎಂದಾಗ ಯಾವ ಧರ್ಮವೂ ದೊಡ್ಡದ್ದಾಗುವುದಿಲ್ಲ. ನನ್ನ ಧರ್ಮದ ಜೊತೆ ಇತರೇ ಧರ್ಮವನ್ನ ಪ್ರೀತಿಸಿ-ಗೌರವಿಸಿದಾಗ ಮಾತ್ರ ತನಗರಿವಿಲ್ಲದೆ ತನ್ನ ಧರ್ಮ ಶ್ರೇಷ್ಟವಾಗುತ್ತೆ ಎಂದು ಜಿಯಾಸಾಬ್ರು ಕೇಳಿದ ಕೂಡಲೇ ಜಾಗ ನೀಡಿ ತನ್ನ ಶಕ್ತಿಗನುಸಾರವಾಗಿ ಗಣಪತಿಗೆ ಭಕ್ತಿ ಸಮರ್ಪಿಸಿ ಗಣಪತಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಇವರ ಈ ಭಕ್ತಿಯ ಕೆಲಸ ಧರ್ಮಗಳ ನಡುವ ಶ್ರೇಷ್ಠತೆಗಾಗಿ ಹೊಡೆದಾಡುವವರಿಗೆ ಮಾದರಿಯಾಗಿದ್ದಾರೆ. ಇನ್ನು ಈ ಗಣಪತಿಯನ್ನ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಸುಧಾ ಯೋಗೇಶ್  ನೀಡಿದ್ದಾರೆ. ಕೇವಲ ಜಿಯಾಸಾಬ್ರಷ್ಟೆ ಅಲ್ಲದೆ ಹ್ಯಾಂಡ್‍ಪೋಸ್ಟ್ ನ ಈ ಬಾಲಗಣಪನಿಗೆ ಸರ್ವಧರ್ಮದ ಸ್ನೇಹಿತರು ಕೂಡ ದೇಣಿಗೆ ಮೂಲಕ ಸಹಕಾರ ನೀಡಿ ಸೌಹಾರ್ದತೆ ಮೆರೆದಿದ್ದಾರೆ.