ಚಿಕ್ಕಮಗಳೂರು:- ಕೆ.ಎಸ್.ಆರ್.ಟಿ.ಸಿ ಡಿಸಿಗೆ ಚಾಕು ಇರಿದ ಘಟನೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಜೂನಿಯರ್ ಅಸಿಸ್ಟೆಂಟ್ ರೀತೇಶ್ ಎಂಬುವವರಿಂದ ಡಿಸಿ ಮೇಲೆ ಹಲ್ಲೆ ನಡೆದಿದ್ದು, ರೀತೇಶ್ ರವರ ಹಾಜರಾತಿ ಸರಿಯಿಲ್ಲ ಎಂದು ಡಿಸಿಯು ರಿತೇಶ್ ರವರ ಕುಟುಂಬದವರನ್ನು ಕರೆಸಿ ಕೌನ್ಸಿಲಿಂಗ್ ಮಾಡಿರುತ್ತಾರೆ. ಈ ಕುರಿತಂತೆ ಕುಟುಂಬದವರ ಮನವಿ ಮೇರೆಗೆ ಚಿಕ್ಕಮಗಳೂರಿನಿಂದ ರಿತೇಶ್ ರವರನ್ನು ಬೇಲೂರಿಗೆ ವರ್ಗಾವಣೆ ಮಾಡಿದ್ದು ಇದರಿಂದ ಅವಮಾನ ಮಾಡಿದ್ದಾರೆ ಎಂದು ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಅಧಿಕಾರಿ ಜಗದೀಶ್ ಕುಮಾರ್ ರವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಆರೋಪಿ ರೀತೇಶ್ ನಾಪತ್ತೆಯಾಗಿದ್ದಾನೆ. ಘಟನೆ ಕುರಿತು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










