ಮೂಡಿಗೆರೆ : ಸುರಕ್ಷಿತಾ ನಿಯಮ ಪಾಲನೆಯೊಂದಿಗೆ ಶ್ರದ್ದಾ ಭಕ್ತಿಯಿಂದ ಬಕ್ರೀದ್ ಆಚರಣೆ…

503
firstsuddi

ಮೂಡಿಗೆರೆ : ಕೊರೊನಾ ಹಿನ್ನಲೆಯಲ್ಲಿ ಬಕ್ರೀದ್ ಹಬ್ಬವನ್ನು ಸುರಕ್ಷಿತಾ ನಿಯಮಗಳ ಪಾಲನೆಯೊಂದಿಗೆ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಮೂಡಿಗೆರೆ, ಕೊಟ್ಟಿಗೆಹಾರ ಹಾಗೂ ಬಣಕಲ್ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆಗೂ ಮುನ್ನ ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿತ್ತು. ಕೊಟ್ಟಿಗೆಹಾರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಪ್ರವಚನ ನೀಡಿ ಮಾತನಾಡಿದ ಧರ್ಮಗುರುಗಳಾದ ಅಬ್ದುಲ್ ರೆಹಮನ್ ಫೈಝಿ, ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ತ್ಯಾಗ ಮಾಡುವ ಸಂದರ್ಭಗಳು ಎದುರಾಗುತ್ತವೆ. ಎಲ್ಲರ ಬದುಕು ಹಸನಾಗಲು ತ್ಯಾಗವೂ ಮುಖ್ಯ ಎಂದರು.
ಮುಸ್ಲಿಂ ಭಾಂಧವರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಬಡ ವರ್ಗದವರಿಗೆ ದಾನ ಮಾಡಿ ಪರಸ್ಪರ ಆಲಿಂಗಿಸದೇ ದೂರದಲ್ಲೆ ಶುಭಾಶಯ ವಿನಿಮಯ ಮಾಡಿದರು.