ಮೂಡಿಗೆರೆ : ಹೊರನಾಡು ಹಾಗೂ ಧರ್ಮಸ್ಥಳಕ್ಕೆ ಕೋಲಾರದ ಭಕ್ತರಿಂದ ಹೊರಕಾಣಿಕೆ…

576
firstsuddi

ಕೊಟ್ಟಿಗೆಹಾರ : ಕೋಲಾರದ ಅಂತರಗಂಗೆ ಪತ್ರಿಕೆ ಹಾಗೂ ಸುಗುಟೂರು ಮತ್ತು ಉರುಗಲಿ ಗ್ರಾಮಸ್ಥರ ವತಿಯಿಂದ ಹೊರನಾಡು ಹಾಗೂ ಧರ್ಮಸ್ಥಳಕ್ಕೆ ತರಕಾರಿಯನ್ನು ಹೊರಕಾಣಿಕೆಯಾಗಿ ನೀಡಲಾಯಿತು.
ಕೋಲಾರದ ಅಂತರಗಂಗೆ ಪತ್ರಿಕೆಯ ವರದಿಗಾರರಾದ ಮುರಳಿ ಮಾತನಾಡಿ ಸುಮಾರು 50 ಸಾವಿರ ಮೌಲ್ಯದ 4 ಸಾವಿರ ಕೆಜಿ ತರಕಾರಿಯನ್ನು ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನ ಮತ್ತು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಆದರ್ಶ್ ಬಾಳೂರು, ಕೋಲಾರದ ಸುರೇಶ್, ಮಂಜುನಾಥ್ ಇದ್ದರು.