ಮೂರನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್‌ ಆಯ್ಕೆ…

54
firstsuddi

ಬೀಜಿಂಗ್ : ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್‌ ಅವರು ಆಯ್ಕೆಯಾಗಿದ್ದಾರೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ 14 ನೇ ಸಭೆಯಲ್ಲಿ ಸಂಸತ್ತಿನ ಸುಮಾರು 3,000 ಸದಸ್ಯರು ಜಿನ್‌ಪಿಂಗ್‌ಗೆ ಚೀನಾದ ಅಧ್ಯಕ್ಷರಾಗಲು ಸರ್ವಾನುಮತದಿಂದ ಮತ ಹಾಕಿದ್ದಾರೆ.

ಚುನಾವಣೆಯಲ್ಲಿ ಕ್ಸಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಅಭ್ಯರ್ಥಿ ಇರಲಿಲ್ಲ ಎಂದು ವರದಿಗಳು ತಿಳಿಸಿವೆ. ಚೀನಾದ ಹೊಸ ಸಂಸತ್ತಿನ ಅಧ್ಯಕ್ಷರಾಗಿ ಝಾವೊ ಲೆಜಿ ಮತ್ತು ಹೊಸ ಉಪಾಧ್ಯಕ್ಷರಾಗಿ ಹಾನ್ ಝೆಂಗ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ, ಕ್ಸಿ ಜಿನ್‌ಪಿಂಗ್‌ ಅವರು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3ನೇ ಬಾರಿ 5 ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದು, ಈ ಮೂಲಕ ದಾಖಲೆ ಸೃಷ್ಟಿಸಿದ್ದರು.