ಬೆಂಗಳೂರು : ಕಬ್ಬಿಣದ ತುಂಡು ಬಿದ್ದು ಕಾರಿನ ಗ್ಲಾಸ್ ಜಖಂ…

75
firstsuddi

ಬೆಂಗಳೂರು : ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ದುರ್ಮರಣಕ್ಕೀಡಾಗಿದ್ದರು. ಇದೀಗ ಮತ್ತೊಂದು ಅವಘಡ ನಡೆದಿದೆ. ಕಬ್ಬಿಣದ ತುಂಡು ಬಿದ್ದು ಕಾರಿನ ಗ್ಲಾಸ್ ಜಖಂ ಆದ ಘಟನೆ ಯಶವಂತಪುರದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ಸ್ಟೇಷನ್ ಕೆಳಗೆ ನಡೆದಿದೆ.

ರಿತೇಶ್ ಎಂಬವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಕಾರು ಮೇಟ್ರೋ ಸ್ಟೇಷನ್ ಕೆಳಗೆ ಬರುತ್ತಿದ್ದಂತೆಯೇ ಕಬ್ಬಿಣದ ತುಂಡು ಕಾರಿನ ಗ್ಲಾಸ್ ಮೇಲೆ ಬಿದ್ದಿದೆ. ಕಬ್ಬಿಣದ ತುಂಡು ಬಿದ್ದ ರಭಸಕ್ಕೆ ಕಾರಿನ ಗ್ಲಾಸ್ ಒಡೆದು ಹೋಗಿದೆ.

ಮೇಟ್ರೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಆಗಿದೆ ಎಂದು ಇದೀಗ ಕಾರಿನ ಮಾಲೀಕ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಬ್ಬಿಣದ ಪೀಸ್ ಎಲ್ಲಿಂದ ಬಿತ್ತು ಅನ್ನೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.