ಬೆಂಗಳೂರು : ಕೊರೊನಾ ಭೀತಿ ಹಿನ್ನಲೆ ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಗಳೇನು?
ವೀಕೆಂಡ್ ಕಫ್ರ್ಯೂ ವೇಳೆ ಮೆಟ್ರೋ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ರೈಲುಗಳು 20 ನಿಮಿಷಗಳ ಬದಲಾಗಿ 30 ನಿಮಿಷಗಳ ಆವರ್ತನಗಳಲ್ಲಿ ಕಡಿಮೆ ಮೆಟ್ರೋಗಳು ಕಾರ್ಯ ನಿರ್ವಹಿಸುತ್ತವೆ. ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ. ಸೀಟು ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಸಬೇಕು. ಮೆಟ್ರೋ ರೈಲುಗಳಲ್ಲಿ ಆಸನ ಸಾಮಥ್ರ್ಯ ತುಂಬಿರುವುದು ಗಮನಿಸಿದರೆ ಅವರು ಆ ರೈಲನ್ನು ಬಿಟ್ಟು ಮುಂದಿನ ರೈಲು ಹತ್ತಬೇಕಾಗುತ್ತದೆ ಎಂದು ತಿಳಿಸಲಾಗಿದೆ.










