ಮೈಸೂರು ಉದ್ಯಮಿ ಕೊಲೆ ಪ್ರಕರಣಕ್ಕೆ ರೋಚಕ ತಿರುವು – 16 ವರ್ಷದ ಮಗನಿಂದಲೇ ತಂದೆಯ ಬರ್ಬರ ಹತ್ಯೆ!

71
firstsuddi

ಮೈಸೂರು : ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿ ಸಂಪತ್ ಕುಮಾರ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ನಗರದ ಬೃಂದಾವನ ಬಡಾವಣೆಯಲ್ಲಿ ನಡೆದಿತ್ತು. 16 ವರ್ಷದ ಮಗನ ಮುಂದೆಯೇ ತಂದೆಯನ್ನು ಕೊಲೆ ಮಾಡಲಾಗಿದೆ ಎಂಬ ಸುದ್ದಿ ಹರಡಿತ್ತು. ಇದೀಗ ಈ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ವಿಚಾರಣೆ ವೇಳೆ ಮಗನೇ ತಂದೆಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. 

ಸಂಪತ್ ಪ್ರತಿ ನಿತ್ಯವೂ ತನ್ನ ಪತ್ನಿ – ಮಗನ ಜೊತೆ ಜಗಳವಾಡ್ತಿದ್ದ. ಇದರಿಂದ ಬೇಸತ್ತ ಮಗ, ತನ್ನ ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಬ್ಬಿಣದ ರಾಡ್ ನಿಂದ ತಂದೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಕೊಂದಿರುವುದಾಗಿ ಕಥೆ ಕಟ್ಟಿದ್ದನು. ತನ್ನ ತಾಯಿಗೂ ಇದೇ ಕಥೆ ಹೇಳಿದ ಮಗ, ಅದರ ಆಧಾರದ ಮೇಲೆ ಕೇಸ್ ಕೂಡ ಕೊಡಿಸಿದ್ದ.

ತನಿಖೆ ನಡೆಸಿದ ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ ಮೇಲೆ ಯಾರು ಮನೆಗೆ ಬರದೆ ಇರೋದು ಸ್ಪಷ್ಟವಾಗಿದೆ. ಆಗ, ಮಗನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತಾನೇ ತನ್ನ ತಂದೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.