ಮೊದಲ ದಿನವೇ ಹಲವು ಯೋಜನೆಗಳಿಗೆ ಡೋನಾಲ್ಡ್ ಟ್ರಂಪ್ ಸಹಿ.

34

ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಡೋನಾಲ್ಡ್ ಟ್ರಂಪ್ ಮೊದಲ ದಿನವೇ ಹವಾಮಾನದಿಂದ ಹಿಡಿದು ವಲಸೆವರೆಗೆ ಹಲವು ಆದೇಶಗಳಿಗೆ ಸಹಿ ಹಾಕಿದ್ದಾರೆ. 2024ರ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಅನೇಕ ಭರವಸೆಗಳ ಆದೇಶವನ್ನು ಅವರು ಈಡೇರಿಸಿದರು. ಇದೇ ವೇಳೆ 2021ರ ಜ.6ರಂದು ದಾಳಿ ಮಾಡಿದ ಅನೇಕರಿಗೆ ಕ್ಷಮಾಧಾನವನ್ನು ನೀಡಿದರು. ಅಮೆರಿಕ ವಲಸೆ ಮತ್ತು ಪೌರತ್ವವನ್ನು ಹೇಗೆ ಮರು ವಿನ್ಯಾಸ ಮಾಡಲಿದೆ ಎಂಬ ಗುರಿಯ ಹಲವು ಆದೇಶಗಳಿಗೆ ಸಹಿ ಹಾಕಿದರು. ಅದರಲ್ಲಿ ಒಂದು ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತನ್ನು ಘೋಷಣೆ ಮಾಡಿದರು. ವಿದೇಶಿ ಅಪರಾಧಿಗಳು ಎಂದು ಕರೆಯುವ ಮೂಲಕ ಸಾಮೂಹಿಕ ಗಡೀಪಾರು ಕಾರ್ಯಾಚರಣೆಗೆ ಭರವಸೆ ನೀಡಿದರು. ಜನ್ಮ ಪೌರತ್ವ ಹಕ್ಕನ್ನು ರದ್ದುಗೊಳಿಸುವ ಆದೇಶಕ್ಕೂ ಕೂಡ ಅವರು ಸಹಿ ಹಾಕಿದರು. ಅಮೆರಿಕ ಪೌರತ್ವಕ್ಕಾಗಿ ಅಲ್ಲಿ ಜನಿಸಿದ ಮಕ್ಕಳಿಗೆ ಹಕ್ಕು ನೀಡುವ ಈ ಪೌರತ್ವವನ್ನು ಟ್ರಂಪ್ ರದ್ದು ಮಾಡಿದ್ದು, ಈ ಕ್ರಮವು ಇದೀಗ ಕಾನೂನು ಸವಾಲನ್ನು ಎದುರಿಸಲಿದೆ. 2020ರ ಚುನಾವಣೆ ನಂತರ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ 2021ರ ಜ.6ರ ದಾಳಿಯಲ್ಲಿ ಭಾಗಿಯಾಗಿದ್ದ 1,500 ಜನರಿಗೆ ಟ್ರಂಪ್ ಸಹಿ ಹಾಕಿದರು. ಹೀಗೆ ಇನ್ನೂ ಹಲವಾರು ಯೋಜನೆಗಳಿಗೆ ಡೋನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.